ನ್ಯೂಯಾರ್ಕ್: ಮೂವರು ಮುಸುಕುಧಾರಿ ವ್ಯಕ್ತಿಗಳು ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
ಪಿನಲ್ ಪಟೇಲ್ (52) ಮೃತ ದುರ್ದೈವಿ. ಘಟನೆಯಲ್ಲಿ ಅವರ ಪತ್ನಿ ರೂಪಾಲ್‌ಬೆನ್ ಪಟೇಲ್ ಮತ್ತು ಪುತ್ರಿ ಭಕ್ತಿ ಪಟೇಲ್ ಅವರ ಮೇಲೂ ದುಷ್ಕìಮಿಗಳು ಗುಂಡು ಹಾರಿಸಿದ್ದು, ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿನಲ್ ಅವರು ಕುಟುಂಬ ಸಮೇತ ಜ.20ರಂದು ಕೆಲಸದಿಂದ ಮನೆಗೆ ಮರುಳುತ್ತಿದ್ದರು. ಮನೆಯ ಕಾರು ಪಾರ್ಕಿಂಗ್ ಸಮೀಪ, ಮೂವರು ಮುಸುಕುಧಾರಿಗಳು ಇವರ ಮೇಲೆ ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.
ಜಾರ್ಜಿಯಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ಕಳೆದ ಒಂದು ವಾರದಲ್ಲಿ ಭಾರತೀಯರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.
Related Articles