Advertisement

ಸಂಗಾತಿಗಾಗಿ ಭಾರೀ ಗಾತ್ರದ ಹಾವುಗಳ ನಡುವೆ ಕಾದಾಟ: ಮೈನವಿರೇಳಿಸುವ ವಿಡಿಯೋ ವೈರಲ್

04:48 PM Jul 31, 2020 | Mithun PG |

ನವದೆಹಲಿ: ಭಾರೀ ಗಾತ್ರದ ಎರಡು ಹಾವುಗಳು ಕಾದಾಡುವ ವಿಡಿಯೋವೊಂದು ಸದ್ಯ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಭಾರೀ ಕೂತೂಹಲ ಕೆರಳಿಸಿದೆ. ಅರಣ್ಯಾಧಿಕಾರಿ ಸುಶಾಂತ ನಂದ ಎನ್ನುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ರ್ಯಾಟ್ ಸ್ನೇಕ್ ಎಂದು ಗುರುತಿಸಲಾಗಿದೆ,

Advertisement

ಮೈ ನವಿರೇಳಿಸುವ ಹಾವುಗಳ ಈ ಕಾಳಗವು  ಒಂದು ಸಣ್ಣ ನೀರಿನ ತೊರೆಯಲ್ಲಿ ಆರಂಭವಾಗಿ ಪರಸ್ಪರ ಸುತ್ತಿಕೊಂಡು ದಂಡೆಯ ಮೇಲ್ಬಾಗಕ್ಕೆ ಬಂದಿದೆ. ಪ್ರಾಬಲ್ಯ ಸಾಧಿಸಲಿಕ್ಕಾಗಿಯೇ ಹಾವುಗಳು ಕಾದಾಟ ನಡೆಸಿವೆ ಎಂದೇ ಬಣ್ಣಿಸಲಾಗಿದೆ.
ಅದಾಗ್ಯೂ ಈ ಹಾವುಗಳು ಮಿಲನದಲ್ಲಿ ತೊಡಗಿಸಿಕೊಳ್ಳುತ್ತಿವೆ ಎಂದು ನೀವು ಆಲೋಚಿಸುತ್ತಿದ್ದರೆ ನಿಮ್ಮ ಊಹೆ ತಪ್ಪು. ಇವು ಗಂಡು ಹಾವುಗಳಾಗಿದ್ದು ತಮ್ಮ ಸಂಗಾತಿಯನ್ನು ರಕ್ಷಿಸಿಕೊಳ್ಳಲು ಮತ್ತು ಪ್ರದೇಶದ ಉಳಿವಿಗಾಗಿ ಹೋರಾಡುತ್ತಿವೆ ಎಂದು ಸುಶಾಂತ್ ನಂದ ತಿಳಿಸಿದ್ದಾರೆ.

ನ್ಯಾಷನಲ್ ಜಿಯಾಗ್ರಾಫಿಕ್ ಪ್ರಕಾರ, ಎರಡು ಹಾವುಗಳು ಈ ರೀತಿ ಪರಸ್ಪರ ಸುತ್ತಿಕೊಂಡು ಕಾಳಗ ನಡೆಸುವುದನ್ನು plaiting combat  ಎಂದು ಕರೆಯುತ್ತಾರೆ. ಈ ಹೋರಾಟ ಒಂದು ಹಾವು ಆಯಾಸಗೊಂಡು ಕೆಳಗೆ ಬೀಳುವರೆಗೂ ನಿರಂತರವಾಗಿ ನಡೆಯುತ್ತದೆ ಎಂದು ಉಲ್ಲೇಖಿಸಲಾಗಿದೆ.

Advertisement

 

ಜುಲೈ 31, 2020 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ವ್ಯಾಪಕ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next