Advertisement

ʼಪುಷ್ಪʼ ಸಿನಿಮಾ ಪ್ರೇರಣೆ: ವಾಹನದ ಟಾಪ್‌ ನಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ: ಬಂಧನ

05:44 PM Nov 28, 2022 | Team Udayavani |

ಆಂಧ್ರಪ್ರದೇಶ:‌ ಸುಮಾರು 130 ಕೆಜಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಭಾನುವಾರ ( ನ.27 ರಂದು ) ನಡೆದಿದೆ.

Advertisement

ಕೋರಾಪುಟ್‌ ಪ್ರದೇಶದ ಪಾಂಗಿ ಮಹೇಶ್ವರ್ ಮತ್ತು ದುಂಬ್ರಿಗುಡಾದ ರಮೇಶ್ ಬಂಧಿತರು. ಇವರಿಂದ ಗಾಂಜಾ ಹಾಗೂ  ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ʼಪುಷ್ಪʼ ಸಿನಿಮಾದಿಂದ ಪ್ರೇರಣೆ: ಆರೋಪಿಗಳು ತಮ್ಮ ಬೊಲೆರೋ ವಾಹನದ ಟಾಪ್‌ ನಲ್ಲಿ ಗಾಂಜಾ ಪಾಕೆಟ್‌ ಗಳನ್ನು ಇಟ್ಟು ರಾಜ್ಯದ ಗಡಿಯನ್ನು ದಾಟಲು ಯತ್ನಿಸಿದ್ದಾರೆ. ಅನುಮಾನಾಸ್ಪದವಾಗಿ ಕಂಡ ಎಸ್‌ ಇಬಿ (Special Enforcement Burea) ಪೊಲೀಸರು ವಾಹನವನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಬೊಲೆರೋ ವಾಹನದಲ್ಲಿ ಟಾಪ್‌ ನಲ್ಲಿ ವಿಶೇಷವಾದ ಶೆಲ್ಫ್‌ ಮಾಡಿರುವುದು ಗೊತ್ತಾಗಿದೆ. ಅದರ ಒಳಗಡೆ ನೋಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಕೃತ್ಯ ಮಾಡಲು ಆರೋಪಿಗಳಿಗೆ ಅಲ್ಲು ಅರ್ಜುನ್‌ ಅವರ ಪುಷ್ಪ ಸಿನಿಮಾ ಪ್ರೇರಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next