Advertisement

ಬೋಗಸ್‌ ವೀಸಾ ನೀಡಿ 50 ಮಂದಿಗೆ ವಂಚಿಸಿದ ಜಾಲ ಬಯಲು; ಇಬ್ಬರ ಸೆರೆ

12:29 PM Aug 22, 2017 | udayavani editorial |

ಥಾಣೆ : ಬೋಗಸ್‌ ವೀಸಾ ಮತ್ತು ವಿಮಾನ ಟಿಕೆಟ್‌ ನೀಡಿ ಸುಮಾರು ಐವತ್ತು ಜನರನ್ನು  ವಂಚಿಸಿದ ಇಬ್ಬರನ್ನು ಬಂಧಿಸುವ ಮೂಲಕ ಥಾಣೆ ಪೊಲೀಸರು ನಕಲಿ ವೀಸಾ ಜಾಲವನ್ನು ಬಯಲಿಗೆಳೆದಿದ್ದಾರೆ.

Advertisement

ಮುಂಬ್ರಾದಲ್ಲಿನ ಆರೋಪಿಗಳಲ್ಲಿ ಒಬ್ಟಾತನ ಮನೆಗೆ ದಾಳಿ ನಡೆಸಿದಾಗ ಅಲ್ಲಿ 89 ಪಾಸ್‌ ಪೋರ್ಟ್‌, 62 ವೀಸಾ, ಒಂದು ಲ್ಯಾಪ್‌ ಟಾಪ್‌ ಮತ್ತು ಎರಡು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಕ್ರೈಂ) ಮಕರಂದ್‌ ರಾನಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪೊಲೀಸರ ಪ್ರಕಾರ ಆರು ಮಂದಿ ಈ ನಕಲಿ ವೀಸಾ, ಪಾಸ್‌ ಪೋರ್ಟ್‌ ನೀಡುವ ಬೋಗಸ್‌ ಉದ್ಯೋಗ ನೇಮಕಾತಿ ಕೇಂದ್ರವನ್ನು ಮುಂಬ್ರಾದಲ್ಲಿ ನಡಸುತ್ತಿದ್ದಾರೆ. ಅಮಾಯಕ ಗಲ್ಫ್ ಉದ್ಯೋಗಾಕಾಂಕ್ಷಿಗಳಿಗೆ ಇವರು ದುಬೈ ಮತ್ತು ಕುವೈಟ್‌ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗ ದೊರಕಿಸುವ ಭರವಸೆಯನ್ನು ಇವರು ನೀಡುತ್ತಿದ್ದರು. 

ವೀಸಾ ಮತ್ತು ವಿಮಾನ ಟಿಕೆಟ್‌ ಕೊಡಿಸುವ ಭರವಸೆಯ ಮೇಲೆ ಇವರಿಗೆ 50,000 ರೂ. ಕೊಟ್ಟು ಮೋಸ ಹೋದ ಹುಡುಗಿಯೋರ್ವಳು ಕೊಟ್ಟ ದೂರಿನ ಮೇಲೆ ಪೊಲೀಸರು ಕಾರ್ಯಾಚರಿಸಿದಾಗ ಇಡಿಯ ಜಾಲ ಬಯಲಿಗೆ ಬಂತು. 

Advertisement

Udayavani is now on Telegram. Click here to join our channel and stay updated with the latest news.

Next