Advertisement

ನಮೀಬಿಯಾದಿಂದ ಬಂದ ಎಂಟು ಚೀತಾಗಳನ್ನು ಕಾಯುತ್ತಿರುವುದು ಎರಡು ಆನೆಗಳು; ಯಾಕೆ ಗೊತ್ತಾ?

11:10 AM Sep 20, 2022 | Team Udayavani |

ಭೋಪಾಲ್: ಸುಮಾರು 70 ವರ್ಷಗಳ ಬಳಿಕ ಚೀತಾಗಳು ಭಾರತಕ್ಕೆ ಕಾಲಿರಿಸಿವೆ. ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಎಂಟು ಆಫ್ರಿಕನ್ ಚೀತಾಗಳನ್ನು ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ಬಿಡುಗಡೆ ಮಾಡಿದ್ದರು.

Advertisement

ನಮೀಬಿಯಾದಿಂದ ಎಂಟು ಚೀತಾಗಳನ್ನು ವಿಶೇಷ ವಿಮಾನದ ಮೂಲಕ ತರಿಸಲಾಗಿತ್ತು. ಕುನೋ ಉದ್ಯಾನದಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಇದೀಗ ನರ್ಮದಾಪುರಂನ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಎರಡು ಆನೆಗಳನ್ನು ಚೀತಾಗಳ ರಕ್ಷಣೆಗಾಗಿ ಕುನೋ ಉದ್ಯಾನಕ್ಕೆ ತರಲಾಗಿದೆ. ಲಕ್ಷ್ಮಿ ಮತ್ತು ಸಿದ್ಧನಾಥ್ ಎಂಬ ಆನೆಗಳನ್ನು ಕಳೆದ ತಿಂಗಳು ಉದ್ಯಾನಕ್ಕೆ ಕರೆತರಲಾಗಿತ್ತು.

ಚೀತಾಗಳ ಆಗಮನದ ಮೊದಲು ಈ ವಿಶೇಷ ಆವರಣವನ್ನು ಪ್ರವೇಶಿಸಿದ ಐದು ಚಿರತೆಗಳ ಪೈಕಿ ನಾಲ್ಕು ಚಿರತೆಗಳನ್ನು ಓಡಿಸುವ ಕಾರ್ಯಾಚರಣೆಯಲ್ಲಿ ಈ ಎರಡು ಆನೆಗಳು ಪ್ರಮುಖ ಪಾತ್ರ ವಹಿಸಿವೆ.

ಇದನ್ನೂ ಓದಿ:32 ವರ್ಷಗಳ ಅಮೋಘ ಸೇವೆ : ಐಎನ್‌ಎಸ್‌ ಅಜಯ್‌ ಸೇನೆಯಿಂದ ನಿವೃತ್ತಿ

Advertisement

ಎರಡೂ ಆನೆಗಳು ಈಗ ಚೀತಾಗಳ ಮೇಲೆ ನಿಗಾ ಇಡುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದ ಭದ್ರತಾ ತಂಡಗಳೊಂದಿಗೆ ಹಗಲು ರಾತ್ರಿ ಗಸ್ತು ತಿರುಗುತ್ತಿವೆ.

ನಮೀಬಿಯಾದಿಂದ ಬಂದ ಚೀತಾಗಳು ಸದ್ಯ ಕುನೋ ಉದ್ಯಾನದ ವಿಶೇಷ ಆವರಣದೊಳಗೆ ಒಂದು ತಿಂಗಳು ಕ್ವಾರಂಟೈನ್ ನಲ್ಲಿ ಕಳೆಯಲಿವೆ. ಸಿದ್ದನಾಥ್ ಮತ್ತು ಲಕ್ಷ್ಮಿ ಆನೆಗಳು ಆವರಣದ ಸುತ್ತ ಚೀತಾಗಳ ಕಾವಲು ಕಾಯುತ್ತಿದೆ. ಯಾವುದೇ ವನ್ಯಜೀವಿಗಳು ಆವರಣದೊಳಗೆ ಬರದಂತೆ ನೋಡಿಕೊಳ್ಳಲು ಸಿದ್ಧನಾಥ್ ಮತ್ತು ಲಕ್ಷ್ಮಿ ಆನೆಗಳು ಅರಣ್ಯ ಸಿಬ್ಬಂದಿಯೊಂದಿಗೆ ನಿರಂತರವಾಗಿ ಗಸ್ತು ತಿರುಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next