Advertisement
ಸೋಂಕು ಲಕ್ಷಣವಿದ್ದ ಹಿನ್ನೆಲೆ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಬುಧವಾರ ವರದಿ ಪಾಸಿಟಿವ್ ಎಂದು ಬಂದಿದೆ. ಮತ್ತೂಂದು ಪ್ರಕರಣದಲ್ಲಿ ದಕ್ಷಿಣ ಕನ್ನಡದ 58 ವರ್ಷ ಮಹಿಳೆಗೆ ಏಪ್ರಿಲ್ 28 ರಂದು ಸೋಂಕು ದೃಢಪಟ್ಟಿತ್ತು. ಇವರು ಮೆದುಳಿನ ಸೋಂಕು ಹಾಗೂ ಕ್ಷಯರೋಗದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಜಿಲ್ಲೆಯ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಯಲ್ಲಿ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Related Articles
Advertisement
18 ಮಂದಿ ಬಿಡುಗಡೆ: ಸೋಂಕಿತರ ಪೈಕಿ ಬುಧವಾರ ಬೆಳಗಾವಿ, ಮಂಗಳೂರಿನಲ್ಲಿ ತಲಾ 5 ಮಂದಿ, ಬೆಂಗಳೂರಿನ 4 ಮಂದಿ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಸೇರಿ ಒಟ್ಟು 18 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ 451ರಷ್ಟಾಗಿದೆ. ಉಳಿದ 474 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 10 ಜನರ ಆರೋಗ್ಯ ಗಂಭೀರವಾಗಿದ್ದುಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲಬುರಗಿಯಲ್ಲಿ 8 ಮಂದಿಗೆ ಸೋಂಕು: ಕಲಬುರಗಿಯಲ್ಲಿ ಐದು ಮಂದಿ ಮಹಿಳೆಯರು ಹಾಗೂ ವೈದ್ಯ ಸೇರಿದಂತೆ ಎಂಟು ಮಂದಿಗೆ ಸೋಂಕು ತಗುಲಿದೆ. ಮುಂಬೈನಿಂದ ಬಂದ ಕಮಲಾಪುರ ತಾಲೂಕಿನ 30 ವರ್ಷದ ಸೋಂಕಿತ ವ್ಯಕ್ತಿ (ಪಿ-806)ಯ ಸಂಪರ್ಕದಿಂದಲೇ ನಾಲ್ವರು ಮಹಿಳೆಯರಿಗೆ ಸೋಂಕು ಹರಡಿದೆ. ಮತ್ತೂಂದು ಪ್ರಕರಣದಲ್ಲಿ ಆಂಧ್ರಪ್ರದೇಶದ ಗುಂಟೂರಿನಿಂದ ಬಂದ 19 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ (ಪಿ-848) ಸಂಪರ್ಕದಿಂದ 30 ವರ್ಷದ ಮಹಿಳೆಗೆ, ಸೋಂಕಿತ (ಪಿ-848) ವ್ಯಕ್ತಿಯೊಬ್ಬರಿಗೆ ಮಾಹಿತಿ ಇಲ್ಲದೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ 45 ವರ್ಷದ ವೈದ್ಯರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಕಂಟೈನ್ಮೆಂಟ್ ಪ್ರದೇಶ ಸಂಪರ್ಕ ಹಿನ್ನೆಲೆಯ 60 ವರ್ಷದ ವೃದ್ಧನಿಗೆ ಸೋಂಕು ತಗುಲಿ ಮೃತಪಟ್ಟಿದ್ದಾರೆ.
ಚಿಕಿತ್ಸೆ ನೀಡುತ್ತಿದ್ದ ನರ್ಸ್‌ಗೂ ಸೋಂಕು: ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿತ ರಿಗೆ ಚಿಕಿತ್ಸೆ ನೀಡುತ್ತಿದ್ದ ಓರ್ವ ನರ್ಸ್‌ಗೆ ಸೋಂಕು ತಗುಲಿದೆ. 37 ವರ್ಷದ ನರ್ಸ್ ಕಳೆದ 15 ದಿನಗಳಿಂದ ಕೋವಿಡ್ 19 ವಾರ್ಡ್‌ನಲ್ಲಿ ಕೆಲಸ ಮಾಡಿ, ಬಳಿಕ ಕ್ವಾರಂಟೈನ್ ಆಗಿದ್ದರು. ನಿಯಮಾನುಸಾರ ಸೋಂಕು ಪರೀಕ್ಷಿಸಿದ ವೇಳೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ಆ ನರ್ಸ್ ಜತೆಗಿದ್ದ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ನಗರದ ಮತ್ತೂಂದು ಪ್ರಕರಣದಲ್ಲಿ ಲಂಡನ್‌ನಿಂದ ಬಂದ ಯುವಕನಿಗೆ ಸೋಂಕು ತಗುಲಿದೆ.