Advertisement

ನಾಳೆಯಿಂದ ಎರಡು ದಿನ ಕರಾವಳಿಯಲ್ಲಿ ಸಿಎಂ

08:41 AM Jan 06, 2018 | |

ಮಂಗಳೂರು/ಉಡುಪಿ: ಸಿಎಂ ಸಿದ್ದರಾಮಯ್ಯ ಅವರು ಜ.7ರಿಂದ 2 ದಿನ ದ. ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, 200ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಈ ಭಾಗದಲ್ಲಿ ಮುಖ್ಯಮಂತ್ರಿಗಳ ಮಹತ್ವದ ಪ್ರವಾಸ ಇದು. 

Advertisement

ದಕ್ಷಿಣ ಕನ್ನಡ ಕಾರ್ಯಕ್ರಮ: ಪುತ್ತೂರು, ಬಂಟ್ವಾಳ ಹಾಗೂ ಮೂಡ ಬಿದಿರೆ ವಿ.ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 200 ಕೋ. ರೂ. ವೆಚ್ಚದ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ ಮಾಡಲಿದ್ದಾರೆ. ಪುತ್ತೂರು ವಿ. ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 66.86 ಕೋ. ರೂ. ವೆಚ್ಚದ 21 ಕಾರ್ಯ ಕ್ರಮ ಉದ್ಘಾಟನೆ-ಶಿಲಾನ್ಯಾಸ; ಬೆಳ್ತಂಗಡಿ ವಿ.ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 53.79 ಕೋ. ರೂ. ವೆಚ್ಚದ 15 ಕಾಮ ಗಾರಿ ಉದ್ಘಾಟನೆ-ಶಿಲಾನ್ಯಾಸ, ಮೂಡ ಬಿದಿರೆ ವಿ. ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 79.44 ಕೋ.ರೂ. ವೆಚ್ಚದ 31 ಕಾಮಗಾರಿ ಉದ್ಘಾಟಿಸಲಿದ್ದಾರೆ.

ಉಡುಪಿ ಕಾರ್ಯಕ್ರಮ: ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ 32 ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಿಲಾನ್ಯಾಸ, ಬ್ರಹ್ಮಾವರದಲ್ಲಿ 30 ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ ಹಾಗೂ ಕಾಪುವಿನಲ್ಲಿ 29 ಕಾರ್ಯಕ್ರಮ ಶಿಲಾನ್ಯಾಸ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2 ತಿಂಗಳ ಹಿಂದೆ ಮುಖ್ಯಮಂತ್ರಿಗಳು ಬಂಟ್ವಾಳ ವಿ.ಸಭಾ ಕ್ಷೇತ್ರದಲ್ಲಿ ಸುಮಾರು 249 ಕೋ. ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕು ಸ್ಥಾಪನೆ ನಡೆಸಿದ್ದರು. 2014ರ ವಿಧಾನ ಸಭಾ ಚುನಾವಣೆಗೆ ಮುನ್ನ ಅವರು ಉಳ್ಳಾಲದಿಂದ ಮಲ್ಪೆ ವರೆಗೆ ಸಾಮರಸ್ಯ ನಡಿಗೆ ಹಮ್ಮಿಕೊಂಡಿದ್ದರು. ಆ ಬಳಿಕ ನಡೆದ ಚುನಾವಣೆಯಲ್ಲಿ ಉಭಯ ಜಿಲ್ಲೆಗಳ 13 ಸ್ಥಾನಗಳ ಪೈಕಿ 11 ಕಾಂಗ್ರೆಸ್‌ ಕೈಸೇರಿದ್ದವು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಸಿದ್ದರಾಮಯ್ಯ ಕರಾವಳಿ ಪ್ರವಾಸ ಕೈಗೊಂಡಿದ್ದು, ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕರ್ತರಲ್ಲಿ ಹುರುಪು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದ.ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಈಗಾಗಲೇ ಭರದ ಸಿದ್ಧತೆಯಲ್ಲಿ ತೊಡಗಿದೆ. ಎಐಸಿಸಿ ವೀಕ್ಷಕರು, ಕೆಪಿಸಿಸಿ ನೇಮಿತ ವೀಕ್ಷಕರು ವ್ಯಾಪಕ ಪ್ರವಾಸ ಕೈಗೊಂಡು ಸಂಘಟನೆಯಲ್ಲಿ ತೊಡಗಿ ದ್ದಾರೆ. ಈಗ ಮುಖ್ಯಮಂತ್ರಿಗಳ ಪ್ರವಾಸ ಮತ್ತು ವಾಸ್ತವ್ಯ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next