Advertisement

ಪಾಕ್‌ ಶೆಲ್‌ ದಾಳಿ: ಇಬ್ಬರು ನಾಗರಿಕರ ಸಾವು

09:47 AM Dec 05, 2019 | Lakshmi GovindaRaju |

ಜಮ್ಮು,: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಸೇನೆಯ ಮುಂಚೂಣಿ ನೆಲೆಗಳ ಮೇಲೆ ಪಾಕಿಸ್ಥಾನದ ಸೇನೆಯು ಮಂಗಳವಾರ ಭಾರೀ ಶೆಲ್‌ ದಾಳಿ ಆರಂಭಿಸಿದ್ದು, ಇಬ್ಬರು ನಾಗರಿಕರು ಸಾವಿಗೀಡಾಗಿ ಇತರ 9 ಮಂದಿ ಗಾಯಗೊಂಡಿದ್ದಾರೆ.

Advertisement

ಶೆಲ್‌ ದಾಳಿಯಿಂದ 16 ವರ್ಷದ ಬಾಲಕ ಹಾಗೂ 35 ವರ್ಷದ ಮಹಿಳೆ ಮೃತ ಪಟ್ಟು, 9 ಮಂದಿ ಗಾಯ ಗೊಂಡಿದ್ದಾರೆ. ಪಾಕ್‌ನ ಈ ದುಸ್ಸಾಹಸಕ್ಕೆ ಭಾರ ತೀಯ ಯೋಧರೂ ತಕ್ಕ ಪ್ರತ್ಯುತ್ತರ ನೀಡಿದ್ದು, ಪಾಕ್‌ ಗಡಿಯಾಚೆ ಉಂಟಾದ ಸಾವುನೋವಿನ ಕುರಿತು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

ಅಪರಾಹ್ನ 2.30ರ ವೇಳೆಗೆ ಪಾಕ್‌ ಸೇನೆ ಏಕಾಏಕಿ ಅಪ್ರಚೋದಿತ ದಾಳಿ ನಡೆಸಿದೆ. ಶಹಾಪುರ ಮತ್ತು ಕಿರ್ನಿ ವಲಯದಲ್ಲಿ ವ್ಯಾಪಕ ಶೆಲ್‌ ದಾಳಿ ನಡೆದಿದ್ದು, ಗುಲ್ವಾಜ್‌ ಅಖ್ತರ್‌ ಮತ್ತು ಶೋಯೆಬ್‌ ಅಹ್ಮದ್‌ ಮೃತಪಟ್ಟರೆ, ಇಬ್ಬರು ಮಹಿಳೆಯರು, ಒಬ್ಬ ಬಾಲಕ ಸೇರಿ 9 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಪರಿಸ್ಥಿತಿ ಗಂಭೀರ ವಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಕೆಲವು ಮನೆಗಳಿಗೂ ಭಾರೀ ಹಾನಿಯಾಗಿರುವ ಅಂದಾಜು ಇದೆ. ನಿಖರ ಮಾಹಿತಿ ಇನ್ನಷ್ಟೇ ಸಿಗ ಬೇಕು. ರಾತ್ರಿಯವರೆಗೂ ಶೆಲ್‌ ದಾಳಿ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ಥಾನವು ಈ ವರ್ಷದಲ್ಲಿ ಇದುವರೆಗೆ ಗಡಿಯಲ್ಲಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಯಲ್ಲಿ ಒಟ್ಟು 32 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next