Advertisement

ಟ್ರಾಕ್ಟರ್‌ ಟ್ರಾಲಿ ಮಗುಚಿ ವಿದ್ಯಾರ್ಥಿನಿಯರಿಬ್ಬರ ಸಾವು, ಐವರಿಗೆ ಗಾಯ

05:55 PM Jul 18, 2018 | udayavani editorial |

ಬಂಡಾ : ವೇಗವಾಗಿ ಓಡುತ್ತಿದ್ದ ಟ್ರಾಕ್ಟರ್‌ ಟ್ರಾಲಿ ಮಗುಚಿ ಬಿದ್ದ ಅಪಘಾತದಲ್ಲಿ ಶಾಲೆಗೆ ಹೋಗುವ ಇಬ್ಬರು ಹುಡುಗಿಯರು ಮೃತಪಟ್ಟು ಇತರ ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಚಿತ್ರಕೂಟ ಜಿಲ್ಲೆಯ ಕೋಲ್‌ ಗಾಧಿಯಾ ಗ್ರಾಮದಲ್ಲಿ ನಡೆದಿರುವುದಾಗಿ ಚಿತ್ರಕೂಟ ಜಿಲ್ಲಾ ತಿಳಿಸಿದ್ದಾರೆ.

Advertisement

ಹನ್ನೆರಡಕ್ಕೂ ಅಧಿಕ ಮಕ್ಕಳು ಟ್ರಾಕ್ಟರ್‌ ಟ್ರಾಲಿಯಲ್ಲಿ ಮನೆಗೆ ಮರಳುತ್ತಿದ್ದರು. ತಿರುವೊಂದರಲ್ಲಿ ಚಾಲಕನಿಗೆ ನಿಯಂತ್ರಣ ತಪ್ಪಿದ ಕಾರಣ ಟ್ರಾಲಿ ಮಗುಚಿ ಬಿತ್ತು. 

ಮೃತ ವಿದ್ಯಾರ್ಥಿನಿಯರನ್ನು ಶಾಂತಿ (12) ಮತ್ತು ವಿಭಾ (13) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಐವರು ಮಕ್ಕಳ ಸ್ಥಿತಿ ಗಂಭೀರವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next