Advertisement

ನೀರಿನ ಸಂಪಿಗೆ ಬಿದ್ದು ನರ್ಸರಿ ಓದುವ ಮಕ್ಕಳಿಬ್ಬರು ಸಾವು

08:53 PM Jan 10, 2023 | Team Udayavani |

ಸವದತ್ತಿ : ಸ್ಥಳೀಯ ಗುರ್ಲಹೊಸೂರಿನಲ್ಲಿರುವ ನೂತನವಾಗಿ ವಾಲ್ಮೀಕಿ ಭವನದಲ್ಲಿ ನಿರ್ಮಿಸಲಾಗಿದ್ದ ತೆರೆದ ನೀರಿನ ಹೊಂಡಕ್ಕೆ ಬಿದ್ದು 4 ವರ್ಷದ ಹಸುಗೂಸುಗಳು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿರುವ ಧಾರುಣ ಘಟನೆ ನಡೆದಿದೆ.

Advertisement

ಎಂದಿನಂತೆ ಮುಂಜಾನೆ 9 ಗಂಟೆಗೆ ಮನೆಯಿಂದ ಆಟವಾಡಲು ಅಂಗಳಕ್ಕೆ ತೆರಳಿದ ಬಾಲಕರು ಆಯ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿದ್ದಾರೆ.

ಮಕ್ಕಳು ಕಾಣಲಿಲ್ಲವೆಂದಾಗ ಪೋಷಕರು ಹುಡಕಾಟದಲ್ಲಿ ತೊಡಗಿದ್ದಾರೆ. ಅಲ್ಲಿ ಇಲ್ಲಿ ಎನ್ನುವಷ್ಟರಲ್ಲಿ ನೀರಿನಲ್ಲಿ ಬಿದ್ದಿರುವ ಮಾಹಿತಿ ತಿಳಿದು ಬಂದಿದೆ.

ಗುರ್ಲಹೊಸೂರಿನ ಶ್ಲೋಕ ಶಂಭುಲಿಂಗ ಗುಡಿ (4) ಹಾಗೂ ಚಿದಾನಂದ ಪ್ರಕಾಶ ಸಾಳಂಕಿ (4) ಮೃತ ದುರ್ದೈವಿಗಳು. ಬಾಲಕ ಶ್ಲೋಕ 3 ತಿಂಗಳಲ್ಲಿರುವಾಗಲೇ ತಂದೆ-ತಾಯಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ನಂತರ ಸಹೋದರತ್ತೆ ದೇವಿಕಾ ಮುತ್ತನ್ನವರ ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದ. ಇದೀಗ ಮೃತ ತಂದೆ-ತಾಯಿ ಬಳಿ ಪೋಷಣೆಗೋಸ್ಕರ ಸೇರಿದ್ದಾನೆ. ಇನ್ನೋರ್ವ ಚಿದಾನಂದನ ತಂದೆ ಪ್ರಕಾಶ ಸೆಂಟ್ರಿಂಗ್ ಮತ್ತು ತಾಯಿ ಕವಿತಾ ಗೃಹಣಿ ಅಣ್ಣ ರಾಹುಲ(6) ಬಡ ಕುಂಟಂಬದಲ್ಲಿ ಬೆಳೆದಿದ್ದನು.

ಇದೇ ನೀರು ಸಂಗ್ರಹಕದಲ್ಲಿ ಕಳೆದ ಆರು ತಿಂಗಳ ಹಿಂದೆ ದನ-ಕರುಗಳು ಬಿದ್ದ ಘಟನೆ ನಡೆದು ಸಾರ್ವಜನಿಕರೇ ಅವುಗಳನ್ನು ತೆರುವುಗೊಳಿಸಿದ್ದರು. ಲ್ಯಾಂಡ್ ಆರ್ಮಿ ಅಧಿಕಾರಿಗಳಿಗೆ ಟ್ಯಾಂಕ್ ಮುಚ್ಚಿಸುವಂತೆ ಹಲವು ಬಾರಿ ಆಗ್ರಹಿಸಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯವೀಗ ಇಬ್ಬರು ಹಸುಗೂಸುಗಳನ್ನು ಬಲಿ ಪಡೆದಿದೆ.

Advertisement

ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಹಾಗೂ ಸ್ಥಳಿಕರು ಆಕ್ರೋಶ ವ್ಯಕ್ತಪಡಿಸಿ ಕಟ್ಟಡ ಕಾಮಗಾರಿಗೆ ಸುರಕ್ಷತಾ ಕ್ರಮಗಳಲ್ಲಿದೇ ಈ ದುರ್ಘಟನೆಗೆ ಕಾರಣವಾಗಿದೆ ಎಂದೂ ದೂರಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ಕರುಣೇಶಗೌಡ ಜೆ, ಪಿಎಸ್‍ಐ ಪ್ರವೀಣ ಗಂಗೋಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅನುದಾನ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವದು. ಕಾಮಗಾರಿ ಅವಧಿ ಕುರಿತು ಉಲ್ಲೇಖ ಇರುವದಿಲ್ಲವೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಳಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳನ್ನು ಅಮಾನತ್ತು ಮಾಡಿ. ನೊಂದ ಕುಟುಂಬಗಳಿಗೆ ಪರಿಹಾರ ಒದಗಿಸಿ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಇಲಾಖೆಗೆ ಸೂಕ್ತ ಕ್ರಮವಹಿಸುವಂತೆ ಆದೇಶಿಸಬೇಕು. ಇಲ್ಲವಾದಲ್ಲಿ ಕೆಲವೇ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವದೆಂದು ಮೃತ ಶ್ಲೋಕನ ಸಂಬಂಧಿ ಗಂಗಯ್ಯ ಅಮೋಘಿಮಠ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 1.5 ಕೋಟಿ ಅನುದಾನದಲ್ಲಿ ಲ್ಯಾಂಡ್ ಆರ್ಮಿಗೆ ಭವನ ನಿರ್ಮಿಸಲು ಹಂಚಿಕೆಯಾಗಿತ್ತು. 2017 ರಲ್ಲಿ ಆರಂಭಗೊಂಡು ಕಾಮಗಾರಿ ಅನುದಾನ ನೀಡುತ್ತಿಲ್ಲವೆಂದು ಸುಮಾರು 5 ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿತು. ಭವನದ ಸುತ್ತ ಸುರಕ್ಷತಾ ಕ್ರಮಗಳನ್ನಿರಿಸದೇ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ. ಘಟನೆ ಕುರಿತು ಕೆಆರ್‍ಐಡಿಎಲ್ ಎಇಇ ಪ್ರಭುಕುಮಾರ ವಿರುದ್ಧ ಕುಟುಂಬಸ್ಥರು ಹಾಗೂ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸ್ಯಾಂಟ್ರೊ ರವಿ ಬಂಧನಕ್ಕೆ ತಂಡ ರಚನೆ, ಲುಕ್ ಔಟ್ ನೋಟಿಸ್ ಜಾರಿ: ಎಡಿಜಿಪಿ ಅಲೋಕ್ ಕುಮಾರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next