ಪಾಕಿಸ್ತಾನ: ದೇಶ ವಿಭಜನೆ ವೇಳೆ ಹಲವು ಕುಟುಂಬಗಳು ಭಾರತ-ಪಾಕಿಸ್ತಾನದ ನಡುವೆ ಹಂಚಿಹೋಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಹೀಗೆ, ದೂರವಾಗಿದ್ದ ಸಹೋದರಿಬ್ಬರು ಈಗ ಒಂದಾದರೆ? ಇಂಥದ್ದೊಂದು ಮನಮಿಡಿಯುವ ಕ್ಷಣಕ್ಕೆ ಪಾಕಿಸ್ತಾನದ ಕರ್ತಾರ್ಪುರ ಸಾಕ್ಷಿಯಾಗಿದೆ. ಬರೋಬ್ಬರಿ 74 ವರ್ಷಗಳ ಬಳಿಕ ಅಣ್ಣ-ತಮ್ಮ ಭೇಟಿಯಾಗಿದ್ದಾರೆ.
ಮೊಹಮ್ಮದ್ ಸಿದ್ದೀಕಿ ಮತ್ತು ಮೊಹಮ್ಮದ್ ಹಬೀಬ್ ಎಂಬವರೇ ದೇಶ ವಿಭಜನೆಯಾದಾಗ ಬೇರ್ಪಟ್ಟಿದ್ದ ಸೋದರರು. ಸಿದ್ದೀಕಿ ಪಾಕ್‌ನ ಫೈಸಲಾಬಾದ್‌ನಲ್ಲಿ ವಾಸಿಸುತ್ತಿದ್ದರೆ, ಹಬೀಬ್ ಪಂಜಾಬ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅವರಿಬ್ಬರ ಕುಟುಂಬ ಸದಸ್ಯರು ಜಾಲತಾಣಗಳಲ್ಲಿ ತಮ್ಮ ಕುಟುಂಬದ ಇಬ್ಬರು ಹಿರಿಯರ ಫೋಟೋ ಮತ್ತು ವಿವರಗಳನ್ನು ಅಪ್‌ಲೋಡ್ ಮಾಡಿದ್ದರು. ಅಂತಿಮವಾಗಿ ಎರಡೂ ಕುಟುಂಬದವರು ಪರಸ್ಪರ ಗುರುತು ಹಿಡಿದು ಕರ್ತಾರ್ಪುರ ಕಾರಿಡಾರ್‌ನಲ್ಲಿ ಭೇಟಿಯಾಗಲು ನಿರ್ಧರಿಸಿದರು.
ಅದರಂತೆ ಮಂಗಳವಾರ (ಜ.11) ಕರ್ತಾರ್ಪುರದಲ್ಲಿ ಸಿದ್ದೀಕ್ ಮತ್ತು ಹಬೀಬ್ ಮುಖಾಮುಖೀಯಾಗಿದ್ದು, ಪರಸ್ಪರ ಆಲಿಂಗಿಸಿಕೊಂಡು ಕಣ್ಣೀರಿಟ್ಟ ವಿಡಿಯೋ ವೈರಲ್ ಆಗಿದೆ.