ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲಗಾಣಗಾಪುರ ಸಂಗಮದ ಅಷ್ಟತೀರ್ಥದಲ್ಲಿ ಸ್ನಾನ ಮಾಡಲು ಹೋಗಿದ್ದಾಗ ಇಬ್ಬರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ.
ನೀರು ಪಾಲಾಗಿರುವ ಬಾಲಕರನ್ನು ಪ್ರಕಾಶ (15) ಮತ್ತು ಸೋನು (16) ಎಂದು ಗುರುತಿಸಾಗಿದೆ.
ರಾಜಸ್ಥಾನ ಮೂಲಕ ಇವರು ಕಳೆದ ಹಲವು ವರ್ಷಗಳಿಂದ ದೇವಲಗಾಣಗಾಪುರದಲ್ಲಿಯೇ ತಂಗಿದ್ದರು. ಮಸಾಲೆ ವ್ಯಾಪಾರ ಮಾಡಿಕೊಂಡಿದ್ದರು.
ಮಂಗಳವಾರ ಅಪರಾಹ್ನ ಸಂಗಮದಲ್ಲಿ ಸ್ನಾನ ಮಾಡಲು ಹೋದಾಗ ಸೋನು ಕಾಲು ಜಾರಿ ನದಿಗೆ ಬಿದ್ದು ಸೆಳೆವಿಗೆ ಸಿಲುಕಿ ಹರಿದು ಹೋಗುತ್ತಿದ್ದ. ಈ ವೇಳೆಯಲ್ಲಿ ಆತನನ್ನು ಕಾಪಾಡಲು ಪ್ರಕಾಶ್ ನೀರಿಗೆ ಧುಮುಕಿದ್ದಾನೆ. ಆತನೂ ನೀರಿನ ಸೆಳವಿಗೆ ಮುಳುಗಿ ಹೋಗಿದ್ದಾನೆ.
ಕೂಡಲೇ ಸ್ಥಳದಲ್ಲಿದ್ದವರು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಸ್ಥಳದಲ್ಲಿ ಮೃತ ಬಾಲಕರ ಕುಟುಂಬ ಸದಸ್ಯರು ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ದೇವಲಗಾಣಗಾಪುರ ಠಾಣೆಯ ಪಿಎಸ್‌ಐ ರಾಹುಲ್ ಪವಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.