Advertisement

ಬಾರಾಬಂಕಿ : ಬೈಕ್ ಗಳು ಢಿಕ್ಕಿಯಾದಾಗ ಟ್ರಕ್ ಹರಿದು ಐವರ ಸಾವು

08:00 PM Jul 30, 2022 | Team Udayavani |

ಬಾರಾಬಂಕಿ: ಉತ್ತರಪ್ರದೇಶದ ಬಿಂದೌರಾ ಗ್ರಾಮದಲ್ಲಿ ಎರಡು ದ್ವಿಚಕ್ರವಾಹನಗಳು ಮುಖಾಮುಖಿ ಢಿಕ್ಕಿಯಾದ ಬಳಿಕ ವೇಗವಾಗಿ ಬಂದ ಟ್ರಕ್‌ ಹರಿದು ಐವರು ಸಾವನ್ನಪ್ಪಿದ ಭೀಕರ ಅವಘಡ ಶನಿವಾರ ನಡೆದಿದೆ.

Advertisement

ಮೋಟರ್ ಸೈಕ್ಲಿಸ್ಟ್ ಗಳು ಅಪಘಾತವನ್ನು ತಡೆಯುವಷ್ಟರಲ್ಲಿ ವೇಗವಾಗಿ ಬಂದ ಟ್ರಕ್ ಢಿಕ್ಕಿ ಹೊಡೆದಿದೆ. ಮಸೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು,ಪೊಲೀಸರ ಪ್ರಕಾರ, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮೃತರನ್ನು ಬಾರಾಬಂಕಿ ನಿವಾಸಿ ಪ್ರಶಾಂತ್ ದುಬೆ ಮತ್ತು ಗೊಂಡಾ ಜಿಲ್ಲೆಯ ಪಂಕಜ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಇನ್ನೊಂದು ಬೈಕ್ ನಲ್ಲಿದ್ದ ದೀಪಕ್ ಗೌತಮ್ (28), ಅಭಿಷೇಕ್ ಗೌತಮ್ (23) ಮತ್ತು ಶಿವಕರನ್ ಗೌತಮ್ (32) ಎಂದು ಗುರುತಿಸಲಾಗಿದೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಟ್ರಕ್ ಚಾಲಕನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next