ವಾಡಿ: ನಕಲಿ ಚಾವಿ ಬಳಸಿ ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಾಡಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಲಬುರಗಿ ನಗರದ ಇಂದಿರಾನಗರ ಬಡಾವಣೆಯ ಅಜಯ ಸಿದ್ರಾಮ ಚೌಗಲೆ ಹಾಗೂ ರಾಯಚೂರು ನಗರದ ಸುರೇಶ ಅಲಿಯಾಸ್ ಸೂರಿ ತಂದೆ ನಾಗರಾಜ ಕುರುಬರ ಬಂಧಿತ ಆರೋಪಿಗಳು.
ಬಂಧಿತರಿಂದ ಐದು ಹಿರೋಹೋಂಡಾ ಕಂಪನಿಗೆ ಸೇರಿದ ಐದು ಸ್ಪ್ಲೆಂಡರ್ ಬೈಕ್‌ಗಳು ಮತ್ತು ನಕಲಿ ಚಾವಿಗಳ ಗುಚ್ಚವನ್ನು ಪೊಲೀಸರು ಜಪ್ತಿಮಾಡಿಕೊಂಡಿದ್ದಾರೆ.
ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ವಿವಿಧೆಡೆಯ ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ಗಳನ್ನು ತಮ್ಮ ಹತ್ತಿರವಿದ್ದ ನಕಲಿ ಚಾವಿಗಳ ಸಹಾಯದಿಂದ ವಾಹನ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದ್ದು, ಗುರುವಾರ ಬೆಳಗ್ಗೆ ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿದ್ದ ಪಿಎಸ್‌ಐ ವಿಜಯಕುಮಾರ ಭಾವಗಿ ಅವರಿಗೆ ಇಂಗಳಗಿ ಗ್ರಾಮದಲ್ಲಿ ಈ ಕಳ್ಳರು ಕಣ್ಣಿಗೆ ಬಿದ್ದಿದ್ದಾರೆ. ಅನುಮಾನಾಸ್ಪದವಾಗಿ ನಿಂತಿದ್ದ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಬೆ„ಕ್ ಕಳ್ಳರು ಎಂಬುದು ತಿಳಿದಿದೆ. ಡಿವೈಎಸ್‌ಪಿ ಕೆ.ಬಸವರಾಜ ಮಾರ್ಗದರ್ಶನದಲ್ಲಿ, ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ನೇತೃತ್ವದಲ್ಲಿ ಪಿಎಸ್‌ಐ ವಿಜಯಕುಮಾರ ಭಾವಗಿ, ಕ್ರೈಂ ಪಿಎಸ್‌ಐ ಗಂಗಮ್ಮಾ ಹಾಗೂ ಪೇದೆಗಳಾದ ಲಕ್ಷ್ಮಣ ವಾಣಿ, ರಮೇಶ, ಚೆನ್ನಮಲ್ಲಪ್ಪ, ಮಸ್ತಾನ್, ಹೀರಾಲಾಲ, ದತ್ತು ಜಾನೆ, ಹರೀಶ, ಚೆನ್ನಬಸವ, ಕೊಟ್ರೇಶ, ಕಾಂತಪ್ಪ, ಅಶೋಕ ಹಾಗೂ ಮಹೇಶ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.