ಪಾಟ್ನಾ: ಬಿಹಾರದಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸಲು ಹೊಂಚು ಹಾಕಿದ್ದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ಗೆ ಸೇರಿದ ಇಬ್ಬರು ಆರೋಪಿಗಳನ್ನು ಬಿಹಾರ ಪೊಲೀಸರ ಸಹಕಾರದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಬಂಧಿಸಿದ್ದಾರೆ.
ಬಿಹಾರದ ಬಹುದೂರ್‌ಪುರ್ ಗ್ರಾಮದ ತನ್ವೀರ್ ರಾಜಾ ಅಲಿಯಾಸ್ ಬರ್ಕತಿ ಮತ್ತು ಮೊಹಮದ್ ಅಬಿದ್ ಅಲಿಯಾಸ್ ಆರ್ಯನ್‌ನನ್ನು ಮೋತಿಹಾರಿಯಲ್ಲಿ ಶನಿವಾರ ಬಂಧಿಸಲಾಗಿದೆ.
ಇದೇ ವೇಳೆ ಎನ್‌ಐಎ ರಾಜ್ಯದ ಎಂಟು ಕಡೆ ದಾಳಿ ನಡೆಸಿದೆ. “ಉದ್ದೇಶಿತ ಹತ್ಯೆಗಳಿಗಾಗಿ ಬಂಧಿತ ಇಬ್ಬರು ಆರೋಪಿಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದು-ಗುಂಡುಗಳನ್ನು ಸಂಗ್ರಹಿಸಿದ್ದರು. ಪ್ರಭಾವಿಗಳ ಹತ್ಯೆಗಳ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಆರೋಪಿಗಳು ಯೋಜಿಸಿದ್ದರು,’ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಪಿಎಫ್ಐನ ನಾಲ್ವರು ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು.