Advertisement

ಕಳವಾಗಿದ್ದ ಮೂರ್ತಿಗಳು ಅಮೆರಿಕದಲ್ಲಿ ಪತ್ತೆ!

10:17 PM Oct 25, 2022 | Team Udayavani |

ಚೆನ್ನೈ: ತಮಿಳುನಾಡಿನ ದೇವಾಲಯವೊಂದರಿಂದ 50 ವರ್ಷಗಳ ಹಿಂದೆ ಕಳವು ಮಾಡಲಾಗಿದ್ದ ಮೂರು ಪ್ರಾಚೀನ ಮೂರ್ತಿಗಳು ಅಮೆರಿಕದ ಲಾಸ್‌ ಏಂಜಲೀಸ್‌ನ ಲ್ಯಾಕ್ಮಾ ಮ್ಯೂಸಿಯಂನಲ್ಲಿ ಪತ್ತೆಯಾಗಿದೆ.

Advertisement

ಇವುಗಳು ತಿರುವಾರೂರು ಜಿಲ್ಲೆಯ ಮನ್ನಾರ್‌ಗುಡಿ ತಾಲೂಕಿನ ಅರುಳ್‌ಮಿಗು ವಿಶ್ವನಾಥ ಸ್ವಾಮಿ ದೇವಾಲಯ ದಿಂದ ಕದ್ದಿರುವಂಥ ಮೂರ್ತಿಗಳು ಎಂಬುದು ದೃಢಪಟ್ಟ ಕೂಡಲೇ ಅಮೆರಿಕ ಮೂಲದ ಮ್ಯೂಸಿಯಂ ಮತ್ತು ಹರಾಜು ಸಂಸ್ಥೆಗೆ ತಮಿಳುನಾಡು ಮೂರ್ತಿಗಳ ಘಟಕ ಸಿಐಡಿ ಪತ್ರ ಬರೆದಿದೆ.

ಆ ಮೂರೂ ಮೂರ್ತಿಗಳು ತಮಿಳುನಾಡಿಗೆ ಸೇರಿದ್ದು, ಅದನ್ನು ನಮಗೆ ಮರಳಿಸಬೇಕು ಎಂದು ಮನವಿ ಮಾಡಿದೆ.
50 ವರ್ಷಗಳ ಹಿಂದೆ ಈ ಮೂರ್ತಿಗಳನ್ನು ಕದ್ದು, ಯಾರಿಗೂ ಗೊತ್ತಾಗದಂತೆ ಅಸಲಿ ಮೂರ್ತಿಗಳನ್ನು ಹೋಲುವಂಥ ನಕಲಿ ಮೂರ್ತಿಗಳನ್ನು ಅಲ್ಲಿಡಲಾಗಿತ್ತು. ಜಗತ್ತಿನಾದ್ಯಂತದ ಆರ್ಟ್‌ ಗ್ಯಾಲರಿ, ಮ್ಯೂಸಿಯಂಗಳಲ್ಲಿ ಇವುಗಳನ್ನು ಹುಡುಕಲು ವಿಶೇಷ ತಂಡವನ್ನೂ ರಚಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next