Advertisement

ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದ 500 ಖಾತೆಗಳನ್ನು ಅಮಾನತುಗೊಳಿಸಿದ ಟ್ವೀಟರ್

11:33 AM Feb 10, 2021 | Team Udayavani |

ನವ ದೆಹಲಿ : ಮೂರು ಕೃಷಿ ಕಾಯ್ದೆಗಳ ಬಗ್ಗೆ ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿದ್ದ ಮತ್ತು ಪ್ರಚೋದನಾತ್ಮಕ ವಿಷಯಗಳನ್ನು ಹರುಡುತ್ತಿದ್ದ  ಪಾಕಿಸ್ತಾನಿ ಖಲಿಸ್ತಾನಿ ಮೂಲದ ಕೆಲವು ಟ್ವೀಟರ್ ಖಾತೆಗಳನ್ನು ತೆಗೆದು ಹಾಕಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದ ಹಿನ್ನಲೆಯಲ್ಲಿ ಟ್ವೀಟರ್ ಈಗ ಸುಮಾರು 500 ಖಾತೆಗಳನ್ನು ಅಮಾನತುಗೊಳಿಸಿದೆ.

Advertisement

ಓದಿ :

“ಆರೋಗ್ಯಕರ ಚರ್ಚೆಗೆ ಪಾರದರ್ಶಕತೆ ಮೂಲ ಅಡಿಪಾಯ.  ಇತ್ತೀಚಿನ ವಾರಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಆದ ವರದಿಗಳನ್ನು ಅನುಸರಿಸಿ, ಭಾರತದೊಂದಿಗೆ ತಮ್ಮ ತತ್ವವನ್ನು ರಕ್ಷಿಸುವ ಸಲುವಾಗಿ ಕೆಲವು ನೀತಿ ನಿಯಮಗಳನ್ನು ನವೀಕರಸುತ್ತಿದ್ದದೇವೆ ಎಂದು ಟ್ವೀಟರ್ ಸಂಸ್ಥೆ ಹೇಳಿದೆ.

 

Advertisement

ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಆರೋಗ್ಯಕರ ಚರ್ಚೆ ಮಾಡುವುದಕ್ಕೆ ಪಾರದರ್ಶಕತೆ ಮುಖ್ಯವೆಂದು ನಾವು ನಂಬುತ್ತೇವೆ.

ಓಪನ್ ಇಂಟರ್ ನೆಟ್ ಮತ್ತು ಮುಕ್ತ ಅಭಿವ್ಯಕ್ತಿಗೆ ಆಧಾರವಾಗಿರುವ ಮೌಲ್ಯಗಳು ಪ್ರಪಂಚದಾದ್ಯಂತ ಹೆಚ್ಚು ಅಪಾಯದಲ್ಲಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಹಿಂಸಾಚಾರದ ಘಟನೆಗಳ ನಂತರ ಭಾರತದಲ್ಲಿ ನಮ್ಮ ತತ್ವಗಳನ್ನು ರಕ್ಷಿಸಲು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಟ್ವೀಟರ್ ಹೇಳಿಕೆ ನೀಡಿದೆ.

ಇನ್ನು,  ಈಗಾಗಲೇ ಟ್ವೀಟರ್ ನಿಯಮವನ್ನು ಉಲ್ಲಂಘಿಟಸುತ್ತಿರುವ ಎಲ್ಲಾ ಖಾತೆಗಳ ಮೇಲೆ ಟ್ವೀಟರ್ ಜಾಗತಿಕ ತಂಡ 24/7 ಕಣ್ಣಿಟ್ಟಿದೆ. ಒಂದು ವೇಳೆ ಟ್ವೀಟರ್ ನಿಯಮಗಳನ್ನು ಉಲ್ಲಂಘಿಸುವ ಯತ್ನ ಮಾಡಿದಲ್ಲಿ ಆ ಖಾತೆಗೆ ಸಂಬಂಧ ಪಟ್ಟವರಿಗೆ ನ್ಯಾಯಯುತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕೂಡ ತಿಳಿಸಿದೆ.

ಓದಿ : 

 

Advertisement

Udayavani is now on Telegram. Click here to join our channel and stay updated with the latest news.

Next