ನ್ಯೂಯಾರ್ಕ್: ಹಲವು ತಿಂಗಳುಗಳ ಪರೀಕ್ಷೆಯ ನಂತರ ಟ್ವಿಟ್ಟರ್ ಇದೀಗ ಹೊಸ ಫೀಚರ್ ಒಂದನ್ನು ಬಳಕೆಗೆ ತಂದಿದೆ. ಹೊಸ ಫೀಚರ್ ಅನ್ವಯ ನಮ್ಮ ಟ್ವಿಟ್ಟರ್ ನ ಪೋಸ್ಟ್ ಗೆ ಯಾರು ಕಮೆಂಟ್ ಮಾಡಬೇಕು ಅಥವಾ ಯಾರು ರಿಪ್ಲೈ ನೀಡಬೇಕೆಂಬುದನ್ನು ನಾವೇ ನಿರ್ಧರಿಸಬಹುದು. ಇದು ಟ್ವೀಟ್ಟರ್ ನ ಬಹನಿರೀಕ್ಷಿತ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ಜಗತ್ತಿನಾದ್ಯಂತ ಈ ಹೊಸ ಸೇವೆ ಜಾರಿಗೆ ಬಂದಿದ್ದು, ಆ ಮೂಲಕ ಮೈಕ್ರೋ ಬ್ಲಾಗಿಂಗ್ ನಲ್ಲಿ ಬಳಕೆದಾರರು ತಮ್ಮ ಪೋಸ್ಟ್ ಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಬರುವ ಸಲ್ಲದ ರಿಪ್ಲೈ ಗಳಿಂದ ಮುಕ್ತಿ ಪಡೆಯಬಹುದಾಗಿದೆ. ಈ ಕುರಿತು ಟ್ವಿಟ್ಟರ್ ನ ಪ್ರೊಡಕ್ಟ್ ಹೆಡ್ ಸುಝಾನೆ ಕ್ಷಿ ಮಾಹಿತಿ ನೀಡಿದ್ದಾರೆ.
ಹೊಸ ಫೀಚರ್ ಅನ್ನು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳು, ರಾಜಕಾರಣಿಗಳು, ನಟರು, ಪತ್ರಕರ್ತರು ಮುಂತಾದವರನ್ನು ಗಮನದಲ್ಲಿಟ್ಟುಕೊಮಡು ರೂಪಿಸಲಾಗಿದೆ. ಆ ಮೂಲಕ ಅಪಪ್ರಚಾರ ಮತ್ತು ಅನಗತ್ಯ ಕಿರುಕುಳ ತಡೆಯಲು ಇದು ನೆರವಾಗುತ್ತದೆ. ಈ ಫೀಚರ್ ಮೂಲಕ ತಮ್ಮ ಪೋಸ್ಟ್ ಗಳಿಗೆ ಫಾಲೋವರ್ಸ್ ಕಮೆಂಟ್ ಮಾಡಬಹುದೇ ಅಥವಾ ಇಲ್ಲವೆ ಎಂಬುದನ್ನು ನಿರ್ಧರಿಸಬಹುದು. ಅದಾಗ್ಯೂ ರಿಪ್ಲೈ ಮಾಡಲಾಗದವರು ಈ ಫೋಸ್ಟ್ ಅನ್ನು ರೀಟ್ವೀಟ್ ಮಾಡಬಹುದು. ಲೈಕ್ ಮಾಡುವ ಅವಕಾಶವಿದೆ.
ಕಳೆದ ಮೇ ತಿಂಗಳಿನಲ್ಲಿ ಟ್ವಿಟ್ಟರ್ ಈ ಫೀಚರ್ ನ ಪರೀಕ್ಷೆ ಆರಂಭಿಸಿತ್ತು. ಇದೀಗ ಅಪ್ ಡೇ್ಟ್ ವರ್ಷನ್ ನಲ್ಲಿ ಈ ಫೀಚರ್ ಲಭ್ಯವಿದ್ದು ಬಳಕೆದಾರರು #Everyone #people You fallow, #only people you mention ಈ ಮೂರು ಆಯ್ಕೆಯನ್ನು ಬಳಸಿಕೊಳ್ಳಬಹುದಾಗಿದೆ.