Advertisement

ಟ್ವಿಟರ್‌-ಮಸ್ಕ್ ಜಗಳದಲ್ಲಿ “ಭಾರತ’ದ ಉಲ್ಲೇಖ!

08:56 PM Aug 06, 2022 | Team Udayavani |

ವಾಷಿಂಗ್ಟನ್‌: ಸಾಮಾಜಿಕ ಜಾಲತಾಣವಾದ ಟ್ವಿಟರ್‌ನ್ನು ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್‌ ಮಸ್ಕ್ ಅವರು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡು ನಂತರ ಮುರಿದುಕೊಂಡು, ನ್ಯಾಯಾಲಯದ ಮೆಟ್ಟಲೇರಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಇದೀಗ ಮಸ್ಕ್ ಅವರು ನ್ಯಾಯಾಲಯದಲ್ಲಿ ಭಾರತದ ನಿಯಮವನ್ನು ಪಾಲಿಸದ ಟ್ವಿಟರ್‌ ಬಗ್ಗೆ ದೂರು ಸಲ್ಲಿಸಿರುವುದು ತಿಳಿದುಬಂದಿದೆ.

Advertisement

“ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯವು 2021ರಲ್ಲಿ ಹೇರಿದ ನಿಯಮವನ್ನು ಟ್ವಿಟರ್‌ ಪಾಲಿಸುವಲ್ಲಿ ವಿಫ‌ಲವಾಗಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ಬಗ್ಗೆಯೂ ಉಲ್ಲೇಖೀಸಿರುವ ಅವರು, ಟ್ವಿಟರ್‌ ಭಾರತ ಸರ್ಕಾರದ ವಿರುದ್ಧ ಹೂಡಿರುವ ಮೊಕದ್ದಮೆಯನ್ನು ಬಹಿರಂಗಪಡಿಸುವಲ್ಲಿ ವಿಫ‌ಲವಾಗಿದೆ’ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಟ್ವಿಟರ್‌ ಕೂಡ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ “ಸರ್ಕಾರದ ಹಲವು ನಿಯಮಗಳನ್ನು ನಾವು ಪ್ರಶ್ನಿಸಿದ್ದೇವೆ. ಒಂದು ವೇಳೆ ನಮ್ಮಲ್ಲಿನ ವಿಚಾರಗಳು ಕಾನೂನುಬಾಹಿರ ಎಂದು ಭಾರತ ಪರಿಗಣಿಸುವುದಾದರೆ ನಾವು ಅಲ್ಲಿ ನಮ್ಮ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತೇವೆಂದು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಲಾಗಿದೆ. ಇದರ ಕುರಿತಾಗಿ ಆ.25ರಂದು ವಿಚಾರಣೆ ನಡೆತಯಲಿದೆ’ ಎಂದು ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next