ನವದೆಹಲಿ: ನಿಮ್ಮ ಟ್ವಿಟರ್ ಖಾತೆ ನಿಮ್ಮದೇ ಎಂದು ಅಧಿಕೃತಗೊಳಿಸಿಕೊಳ್ಳುವ ನೀಲಿ ಗುರುತು ಬೇಕೇ? ನೀವಿನ್ನು ಆ್ಯಂಡ್ರಾಯ್ಡ ಮತ್ತು ಐಒಎಸ್ ಅಪ್ಲಿಕೇಶನ್ ಬಳಸುವ ಫೋನ್‌ಗಳಲ್ಲಿ 11 ಡಾಲರ್ ಪಾವತಿಸಿ ಇದನ್ನು ಪಡೆದುಕೊಳ್ಳಬಹುದು.
ಈ ಹಿಂದೆಯೇ ಯೋಜನೆಯನ್ನು ಘೋಷಿಸಿದ್ದ ಟ್ವಿಟರ್ ಈಗದನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮೊದಲು ಇದು ಪ್ರಭಾವಿ ವ್ಯಕ್ತಿಗಳಿಗೆ ಉಚಿತವಾಗಿ ಲಭ್ಯವಾಗುತ್ತಿತ್ತು. ಈಗ ಎಲ್ಲರಿಗೂ ಸಿಗಲಿದೆ. ವ್ಯತ್ಯಾಸವೆಂದರೆ ತಿಂಗಳು ತಿಂಗಳು ಹಣ ಕಟ್ಟಬೇಕು.
ಅದೇ ಕಂಪ್ಯೂಟರ್‌ನಲ್ಲಿ ವೆಬ್ ಅಪ್ಲಿಕೇಶನ್ ಮೂಲಕ ಟ್ವಿಟರ್ ಬಳಸುವುದಾದರೆ ವರ್ಷಕ್ಕೆ 84 ಡಾಲರ್ ಕಟ್ಟಿದರೆ ಸಾಕು. ಈ ಸೇವೆಗೆ ತಿಂಗಳು ತಿಂಗಳು ಪಾವತಿಸುವುದಾದರೆ 8 ಡಾಲರ್ ನೀಡಬೇಕಾಗುತ್ತದೆ. ಈ ವ್ಯತ್ಯಾಸವೇಕೆ, ಇದರ ಹಿಂದಿನ ಲೆಕ್ಕಾಚಾರವೇನು ಎನ್ನುವುದಕ್ಕೆ ಟ್ವಿಟರ್ ಉತ್ತರ ನೀಡಿಲ್ಲ.