Advertisement

ಮಕ್ಕಳ ಅಶ್ಲೀಲ ವಿಡಿಯೋ ಹಂಚಿಕೆ: 57,643 ಟ್ವಿಟರ್‌ ಖಾತೆಗಳು ರದ್ದು

08:35 PM Oct 02, 2022 | Team Udayavani |

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ಅಶ್ಲೀಲತೆಗೆ ಸಂಬಂಧಿಸಿದ ಪೋಟೋ ಮತ್ತು ವಿಡಿಯೋ ಹಂಚಿಕೊಂಡ ದೇಶದ 57,643 ಖಾತೆಗಳನ್ನು ಟ್ವಿಟರ್‌ ರದ್ದು ಮಾಡಿದೆ. ಈ ಬಗ್ಗೆ ಮೈಕ್ರೋಬ್ಲಾಗಿಂಗ್‌ ಜಾಲತಾಣ ಹೇಳಿಕೆ ನೀಡಿದೆ.

Advertisement

ಟ್ವಿಟರ್‌ನಲ್ಲಿ ಮಕ್ಕಳ ಪೋರ್ನೋಗ್ರಫಿ ಪ್ರಸರಣೆ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜು.26ರಿಂದ ಆ.25ರವರೆಗೆ ಮಕ್ಕಳು ಮತ್ತು ಮಹಿಳೆಯರ ಅಶ್ಲೀಲ ವಿಡಿಯೋ, ಪೋಟೋ ಹಂಚಿಕೊಂಡ 57,643 ಖಾತೆಗಳನ್ನು ಬ್ಯಾನ್‌ ಮಾಡಲಾಗಿದೆ ಎಂದು ಟ್ವಿಟರ್‌ ತಿಳಿಸಿದೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್‌ ಕೂಡ, “ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಪ್ರಸರಣೆಗೆ ಸಂಬಂಧಿಸಿದಂತೆ ಟ್ವಿಟರ್‌ ನೀಡಿರುವ ಉತ್ತರ ಅಪೂರ್ಣವಾಗಿದೆ. ಅಲ್ಲದೇ ಈ ಬಗ್ಗೆ ಆಯೋಗಕ್ಕೆ ಅತೃಪ್ತಿ ಇದೆ,’ ಎಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next