Advertisement

ಟ್ವಿಟರ್‌ನಲ್ಲೂ ವಿಡಿಯೋ ಸ್ಕ್ರಾಲ್‌ ಆಯ್ಕೆ; ಇನ್‌ಸ್ಟಾ ರೀಲ್ಸ್‌ ಮಾದರಿಯ ವಿಡಿಯೋಗಳು

12:01 AM Oct 01, 2022 | Team Udayavani |

ಯೂಟ್ಯೂಬ್‌ ಶಾರ್ಟ್ಸ್, ಇನ್‌ಸ್ಟಾಗ್ರಾಂ ರೀಲ್ಸ್‌ನಂತೆಯೇ ಟ್ವಿಟರ್‌ ಕೂಡ ಇದೀಗ ವಿಡಿಯೋ ಸ್ಕ್ರಾಲ್‌ ಆಯ್ಕೆಯನ್ನು ಹೊರತರಲು ಮುಂದಾಗಿದೆ.

Advertisement

ಟ್ವಿಟರ್‌ ವಾಲ್‌ನಲ್ಲಿ ನಿಮಗೆ ಕಾಣಸಿಗುವ ವಿಡಿಯೋವನ್ನು ಒಮ್ಮೆ ಒತ್ತಿದರೆ ಅದು ಫುಲ್ ಸ್ಕ್ರೀನ್‌ ಆಗುತ್ತದೆ. ಅದನ್ನು ಸ್ಕ್ರಾಲ್‌ ಮಾಡುತ್ತಾ ಹೋದರೆ ಬೇರೆ ಬೇರೆ ವಿಡಿಯೋಗಳು ಕಾಣಸಿಗುತ್ತವೆ.

ದಿನನಿತ್ಯದ ವಿದ್ಯಮಾನಗಳ ಕುರಿತಾದ ವಿಡಿಯೋಗಳನ್ನು ನೀವಲ್ಲಿ ವೀಕ್ಷಿಸಬಹುದು ಎಂದು ಟ್ವಿಟರ್‌ ಹೇಳಿಕೊಂಡಿದೆ.

ವಿಡಿಯೋಗಳು ಜನರಿಗೆ ಹೆಚ್ಚು ಆಪ್ತವೆನಿಸುತ್ತಿವೆ. ಅದೇ ಕಾರಣಕ್ಕೆ ಈ ಹೊಸ ಅಪ್‌ಡೇಟ್‌ ತರಲು ನಿರ್ಧರಿಸಿದ್ದೇವೆ ಎಂದೂ ಸಂಸ್ಥೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next