ನ್ಯೂಯಾರ್ಕ್: ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡತಕ್ಕದ್ದು ಎಂದು ಟ್ವಿಟರ್‌ನ ಹೊಸ ಮಾಲಕ ಎಲಾನ್ ಮಸ್ಕ್ ಫರ್ಮಾನು ಹೊರಡಿಸಿದ್ದೇ ತಡ ಹಿರಿಯ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಉದ್ಯೋಗಿಗಳ ವರೆಗೆ ಎಲ್ಲರೂ ರಾಜೀನಾಮೆ ನೀಡುತ್ತಿದ್ದಾರೆ.
ಕಂಪೆನಿಯ ಆಂತರಿಕ ಚಾಟ್ ಬಾಕ್ಸ್‌ನಲ್ಲಿ ಈಗ ಎಲ್ಲರದ್ದೂ ವಿದಾಯ ಹೇಳುವ ಇಮೋಜಿಗಳು ಕಂಡು ಬರುತ್ತಿವೆ. ಇದರಿಂದಾಗಿ ಮೈಕ್ರೋ ಬ್ಲಾಗಿಂಗ್ ಜಾಲತಾಣದ ಆಡಳಿತ ಮಂಡಳಿಗೆ ಹೊಸ ರೀತಿಯ ತಲೆನೋವು ಉಂಟಾಗಿದೆ. ಸಾಮೂ ಹಿಕವಾಗಿ ಉದ್ಯೋಗಿಗಳು ರಾಜೀ ನಾಮೆ ನೀಡು ತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ಸ್ಥಳಗಳಲ್ಲಿ ಕಚೇರಿ ಗಳನ್ನು ಮುಚ್ಚಿರುವ ಘಟನೆಗಳೂ ನಡೆದಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಾಜೀನಾಮೆ ಬಗ್ಗೆ ಹಲವಾರು ಮೀಮ್‌ಗಳು ಅಪ್‌ಲೋಡ್ ಆಗಿದೆ. ಮತ್ತೂಂದು ಬೆಳವಣಿಗೆಯಲ್ಲಿ ಉದ್ಯಮಿ ಮಸ್ಕ್ ಉದ್ಯೋಗಿಗಳ ಸಭೆಯಲ್ಲಿ ಮಾತನಾಡುತ್ತಿದ್ದಂತೆಯೇ ಕಂಪೆನಿಯಿಂದ ಹಲವಾರು ಮಂದಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಕಂಪೆನಿ ತೊರೆಯುವುದು ಬೇಡ ಎಂದು ಮನವಿ ಮಾಡಿಕೊಂಡರೂ ಅವರು ಅದನ್ನು ಪರಿಗಣಿಸಲಿಲ್ಲ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.
ಇದನ್ನೂ ಓದಿ : ಡಿಜಿಟಲ್ ಸೋರಿಕೆಗೆ 500 ಕೋಟಿ ದಂಡ! ಕೇಂದ್ರ ಸರಕಾರದ ಹೊಸ ಪ್ರಸ್ತಾವ