Advertisement

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

12:13 PM Jan 08, 2025 | Team Udayavani |

ಚಿಕ್ಕಮಗಳೂರು: ಜಿಲ್ಲಾಡಳಿತ ಮುಂದೆ ಶರಣಾಗಬೇಕಿದ್ದ ಆರು ಜನ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗತಿಯಾಗಲಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ಬೆಂಗಳೂರಿನಲ್ಲಿ ಶರಣಾಗಲಿದ್ದಾರೆ.

ಆರು ಜನ ನಕ್ಸಲರ ಪೋಷಕರು ಚಿಕ್ಕಮಗಳೂರು ಜಿಲ್ಲಾಡಳಿದ ಮುಂದೆ ತಮ್ಮವರನ್ನು ನೋಡಲು ಕಾತರದಿಂದ ಕಾದಿದ್ದರು. ಆದರೆ, ಇದು ದಿಢೀರ್ ಬದಲಾವಣೆಗೊಂಡಿದ್ದು, ಇದೀಗ ಪೋಷಕರನ್ನು ಬೆಂಗಳೂರಿಗೆ ಕಳಿಸಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇಂದು (ಜ.8) ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಸಿ.ಎಂ.ಸಮ್ಮುಖದಲ್ಲಿ ಶರಣಾಗಲಿದ್ದಾರೆ.

ನರಸಿಂಹರಾಜಪುರವರೆಗೂ ಆಗಮಿಸಿದ ನಕ್ಸಲರು ನಂತರ ಸಿ.ಎಂ ಆದೇಶದ ಮೇರೆಗೆ ಮಾರ್ಗ ಬದಲಾಯಿಸಿ ಬೆಂಗಳೂರಿಗೆ ತೆರಳಿದ್ದಾರೆ.

Advertisement

ಚಿಕ್ಕಮಗಳೂರು ಆಗಮಿಸಿದ ಸಂಘಟನೆ ಮುಖಂಡರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.

ಬೆಂಗಳೂರಿಗೆ ತೆರಳುವ ವಿಚಾರವನ್ನು ಶಾಂತಿಗಾಗಿ ಎಂದು ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್ ಘೋಷಿಸಿದರು.

ಮುಂಡಗಾರು ಲತಾ ಸಹೋದರ ಶೇಷೇಗೌಡ ಹೇಳಿಕೆ:

ಚಿಕ್ಕಮಗಳೂರು: ನಮ್ಮ ತಂದೆ-ತಾಯಿಗೆ ಮುಂಡಗಾರು ಲತಾ ಕೊನೆ ಮಗಳು. ವ್ಯವಸ್ಥೆಯ ವಿರುದ್ಧ ಹೋರಾಡಲು 24 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಈಗ ಮುಖ್ಯವಾಹಿನಿಗೆ ಬಂದಿರುವುದು ಸಂತೋಷ ತಂದಿದೆ. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು.  -ಮುಂಡಗಾರು ಲತಾ ಸಹೋದರ ಶೇಷೇಗೌಡ

Advertisement

Udayavani is now on Telegram. Click here to join our channel and stay updated with the latest news.

Next