Advertisement
ಟ್ವಿನ್ ಶರ್ಟ್ ಎಂದೇ ಪ್ರಸಿದ್ಧಿ ಪಡೆದಿದ್ದು, ಎಲ್ಲ ವಯಸ್ಸಿನವರೆಗೂ ಒಪ್ಪುತ್ತದೆ. ಹುಟ್ಟಿದ ಹಬ್ಬ, ಪಾರ್ಟಿ, ಹೀಗೆ ವಿವಿಧ ಸನ್ನಿವೇಶಕ್ಕೆ ತಕ್ಕಂತೆ ಇದನ್ನು ಧರಿಸಬಹುದಾಗಿದ್ದು ಕಡಿಮೆ ಬೆಲೆಯಲ್ಲಿ ಇದು ದೊರೆಯುತ್ತದೆ.
ಹತ್ತು ಹಲವು ಸ್ಲೋಗನ್‌ಗಳನ್ನು ಹೊತ್ತ ಶರ್ಟ್‌ಗಳು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದು, ಪ್ಲೇನ್ ಶರ್ಟ್‌ಗಳ ಮೇಲೆ ನಮಗೆ ಬೇಕಾದ ವಿನ್ಯಾಸಗಳನ್ನು ಮಾಡಿಸಿಕೊಳ್ಳಬಹುದು. ಪ್ರೇಮಿಗಳು ಹೆಸರಿನ ಮೊದಲ ಅಕ್ಷರಕ್ಕೆ, ಇನ್ನು ಕೆಲವರು ಹುಟ್ಟಿದ ದಿನಕ್ಕನುಗುಣವಾಗಿ ಶರ್ಟ್ ಹಾಕಿಕೊಳ್ಳುತ್ತಿದ್ದಾರೆ ಅದಲ್ಲದೆ ಸಮಾರಂಭಗಳಲ್ಲಿ ಇಡೀ ಕುಟುಂಬ ಒಂದೇ ರೀತಿಯಲ್ಲಿ ಶರ್ಟ್ ತೊಡುವುದು ಫ್ಯಾಶನ್ ಆಗಿದೆ. ಫೋಟೋ ಶೂಟ್‌ಗೆ ಬೆಸ್ಟ್
ಹೆಚ್ಚುತ್ತಿರುವ ಫೋಟೋ ಶೂಟ್ಗಳಿಗೆ ಒಂದೇ ಬಣ್ಣದ ಟೀ ಶರ್ಟ್ ಉತ್ತಮ ಆಯ್ಕೆ. ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ಗಳಿಗೆ ಇದನ್ನು ಹೆಚ್ಚು ಬಳಸುತ್ತಿದ್ದಾರೆ. ಅದಲ್ಲದೆ ದೂರ ಪ್ರಯಾಣ ಮಾಡುವಾಗ, ಹಾಗೂ ಪಾರ್ಟಿಗಳಿಗೂ ಇದನ್ನು ಧರಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Related Articles
ಮನೆಯಲ್ಲಿ ಟ್ವಿನ್ಸ್ ಮಕ್ಕಳಿದ್ದರೆ ಅಥವಾ ಅಣ್ಣ -ತಂಗಿ, ಅಕ್ಕ-ತಂಗಿ ಫ್ರೆಂಡ್ಸ್ ಅವರಿಗೆ ಒಂದೇ ರೀತಿಯ ಬಟ್ಟೆ ಹಾಕುವುದು ಟ್ರೆಂಡ್ ಆಗಿದೆ. ವಿಶೇಷವೆನೆಂದರೆ ಅಜ್ಜ-ಅಜ್ಜಿ ಮಗ-ಸೊಸೆ ಮೊಮ್ಮಕ್ಕಳು ಒಂದೇ ರೀತಿಯ ಶರ್ಟ್ ಧರಿಸುವುದು ಕೂಡ ಹೆಚ್ಚಾಗಿದೆ. ಹೀಗೆ ಮಾರುಕಟ್ಟೆಯಲ್ಲಿ 300 ರೂ. ನಿಂದ ಶೂರುವಾಗಿ 1000 ರೂ.ವರೆಗೂ ಇದರ ಬೆಲೆಯಿದ್ದು ಬೆಟ್ಟೆಯ ಗುಣಮಟ್ಟಕ್ಕೆ ತಕ್ಕಂತೆ ದರಗಳನ್ನು ನಿಗದಿಪಡಿಸಲಾಗಿದೆ.
Advertisement
ವಿವಿಧ ರೀತಿಯ ಬಟ್ಟೆ, ವಿನ್ಯಾಸಕಾಟನ್, ನೈಲಾನ್, ಸಿಂಥೆಟಿಕ್ ಬಟ್ಟೆಗಳಲ್ಲಿ ಇವು ಲಭ್ಯವಿದ್ದು ವಿವಿಧ ಬಟ್ಟೆಗಳಿಗೆ ಅದಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿರುತ್ತದೆ. ಕೆಲವು ಶರ್ಟ್ ತುಂಬಾ ಸಿಂಪಲ್ ಆಗಿದ್ದು ಗೊಂಬೆಗಳು ಅಥವಾ ಸ್ಲೋಗನ್‌ಗಳಿರುತ್ತವೆ. ಇನ್ನು ಕೆಲವು ವಿಭಿನ್ನ ಕಲರ್ ಕಾಂಬಿನೇಷನ್ ಹೊಂದಿದ್ದು ವಿಭಿನ್ನ ಡಿಸೈನ್‌ಗಳಿಂದ ಮತ್ತು ಸ್ಟೋನ್‌ಗಳಿಂದ ಮಾಡಿರಲಾಗುತ್ತದೆ. ಪ್ಲೇನ್ ಟೀ ಶರ್ಟ್ ಮೇಲೆ ಕಸೂತಿ ಹಾಕಿದವುಗಳಿಗೂ ಕೂಡ ತುಂಬಾ ಬೇಡಿಕೆ ಇದ್ದು ಹೆಚ್ಚಿನ ವರ್ಕ್‌ಗಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗುತ್ತವೆ. •ಪ್ರೀತಿ ಭಟ್ ಗುಣವಂತೆ