Advertisement

ಟ್ವೆಂಟಿ ಒನ್‌ ಅವರ್ಸ್‌: ಥ್ರಿಲ್ಲರ್‌ ಸ್ಟೋರಿಯಲ್ಲಿ ಡಾಲಿ ಧನಂಜಯ್‌

03:41 PM May 09, 2022 | Team Udayavani |

ಡಾಲಿ ಧನಂಜಯ್‌ ನಟನೆಯ ಹೊಸ ಚಿತ್ರವೊಂದು ಸದ್ದಿಲ್ಲದೇ ಬಿಡುಗಡೆ ಹಂತಕ್ಕೆ ಬಂದಿದೆ. ಅದು “ಟ್ವೆಂಟಿ ಒನ್‌ ಅವರ್ಸ್‌’. ಸದ್ದಿಲ್ಲದೇ ಕೊರೊನಾ ಲಾಕ್‌ ಡೌನ್‌ ಗ್ಯಾಪ್‌ನಲ್ಲಿ ಧನಂಜಯ್‌ ಅವರ ” ಟ್ವೆಂಟಿ ಒನ್‌ ಅವರ್ಸ್‌’ ಎಂಬ ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸಿದ್ದಾರೆ.

Advertisement

ಜೈಶಂಕರ್‌ ಪಂಡಿತ್‌ ನಿರ್ದೇಶಿಸಿರುವ ಈ ಚಿತ್ರ ಮೇ 20 ರಂದು ಚಿತ್ರ ಮಂದಿರಕ್ಕೆ ಲಗ್ಗೆ ಇಡುತ್ತಿದೆ. ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಧನಂಜಯ್‌ ಸೇರಿದಂತೆ ಇಡೀ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಚಿತ್ರದ ಬಗ್ಗೆ ಮಾತನಾಡಿದ ಧನಂಜಯ್‌, “ಇತ್ತೀಚೆಗೆ ಈ ಚಿತ್ರದ ಕುರಿತು ಪೋಸ್ಟ್ ಹಾಕಿದಾಗ, ಯಾವ ಗ್ಯಾಪ್‌ ನಲ್ಲಿ ಈ ಸಿನಿಮಾ ಮಾಡಿದ್ದೀರಾ? ಅಂತ ಗೆಳೆಯರು ಕೇಳಿದರು. ಮೊದಲ ಲಾಕ್‌ ಡೌನ್‌ ನಂತರ ಮಾಡಿರುವ ಸಿನಿಮಾ ಇದು. ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕಥೆಯಿದು. ನಾನು ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕಥೆಯಾಗಿರುವುದರಿಂದ ಕನ್ನಡ ಹಾಗೂ ಮಲಯಾಳಂನಲ್ಲಿ ಸಂಭಾಷಣೆ ಇರುತ್ತದೆ. ಆದರೆ ಕರ್ನಾಟಕದಲ್ಲಿ ಈ ಚಿತ್ರ ಪೂರ್ತಿ ಕನ್ನಡದ ಸಂಭಾಷಣೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲಿ ಬಿಡುಗಡೆಯಾದ ನಂತರ ಕೇರಳದಲ್ಲಿ ತೆರೆ ಕಾಣುತ್ತದೆ. ಒಳ್ಳೆಯ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರ ತಂಡ. ಬಹಳ ದಿನಗಳ ನಂತರ ಸಸ್ಪೆನ್ಸ್  ಥ್ರಿಲ್ಲರ್‌ ಚಿತ್ರವೊಂದರಲ್ಲಿ ನಟಿಸಿದ್ದೇನೆ’ ಎನ್ನುವುದು ಧನಂಜಯ್‌ ಮಾತು.

ಇದನ್ನೂ ಓದಿ: ಮೇ 13ಕ್ಕೆ “ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ” ರಿಲೀಸ್

“ಇದು ಸಸ್ಪೆನ್ಸ್  ಥ್ರಿಲ್ಲರ್‌ ಚಿತ್ರ. ಇಪ್ಪತ್ತೂಂದು ಗಂಟೆಗಳಲ್ಲಿ ನಡೆಯುವ ವಿಶೇಷ ಕಥೆ ಹೊಂದಿರುವ ಚಿತ್ರವಿದು. ಧನಂಜಯ್‌ ನಿರ್ದೇಶಕರ ನಟ. ಅವರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ದುರ್ಗಾ ಕೃಷ್ಣ, ಸುದೇವ್‌ ನಾಯರ್‌, ರಾಹುಲ್‌ ಮಾಧವ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ’ ಎಂದರು ನಿರ್ದೇಶಕ ಜೈಶಂಕರ್‌ ಪಂಡಿತ್‌.

Advertisement

ಸುದೇವ್‌ ನಾಯರ್‌ ಮಾತನಾಡಿ, “ನಾನು ಈ ಹಿಂದೆ ಓಲ್ಡ್‌ ಮಾಂಕ್‌ ಚಿತ್ರದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಧನಂಜಯ್‌ ಜೊತೆಗೆ ಅಭಿನಯಿಸಿದ್ದು ಖುಷಿಯ ವಿಚಾರ’ ಎಂದರು.

ನಿರ್ಮಾಪಕರಾದ ಬಾಲಕೃಷ್ಣ ಎನ್‌.ಎಸ್‌, ಅಭಿಷೇಕ್‌ ರುದ್ರಮೂರ್ತಿ, ಸುನೀಲ್‌ ಗೌಡ, ಹಾಗೂ ಪ್ರವೀಣ್‌ ಮಹದೇವ್‌ ಸಹ ನಿರ್ಮಾಣದ ಬಗ್ಗೆ ಮಾತನಾಡಿದರು. ರುಪರ್ಟ್‌ ಫ‌ರ್ನಾಂಡಿಸ್‌ ಸಂಗೀತ ನಿರ್ದೇಶನ, ತಿರುನವುಕ್ಕರಸು ಛಾಯಾಗ್ರಹಣ, ರಿಚರ್ಡ್‌ ಕೆವಿನ್‌ ಸಂಕಲನ ಹಾಗೂ ಪ್ರತಾಪ್‌ ಆರ್‌ ಮೆಂಡನ್‌ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಸುಕೃತ್‌ ವಿ ಹಾಗೂ ಡಿ.ವಿ.ಬಾಲಸುಬ್ರಹ್ಮಣ್ಯ ಸಂಭಾಷಣೆ ಬರೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next