Advertisement

ದಿಲ್ಲಿ ವಿದ್ಯಾರ್ಥಿನಿಯ ಫೋಟೋ ತಿದ್ದಿದ ಪಾಕ್‌ ಗೆ ತಕ್ಕ ಶಾಸ್ತಿ!

08:49 AM Nov 20, 2017 | Team Udayavani |

ಹೊಸದಿಲ್ಲಿ: ಭಾರತದ ಕಾನೂನು ವಿದ್ಯಾರ್ಥಿನಿ ಯೊಬ್ಬಳು ಟ್ವಿಟರ್‌ನಲ್ಲಿ ಹಾಕಿದ್ದ ಫೋಟೋವೊಂದನ್ನು ತಿದ್ದಿ ಭಾರತ ವಿರೋಧಿ ಸಂದೇಶವುಳ್ಳ ಫೋಟೋವನ್ನಾಗಿ ಪರಿವರ್ತಿಸಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಪಾಕಿಸ್ಥಾನ್‌ ಡಿಫೆನ್ಸ್‌ ಫೋರಂ ಎಂಬ ಟ್ವಿಟರ್‌ ಹ್ಯಾಂಡಲ್‌ (#pakistandefenceforum) ಅನ್ನು ಟ್ವಿಟರ್‌ ಸಂಸ್ಥೆ ಅಮಾನತುಗೊಳಿಸಿದೆ.

Advertisement

ವಿದ್ಯಾರ್ಥಿನಿ ಹೆಸರು ಕವಾಲ್‌ಪ್ರೀತ್‌ ಕೌರ್‌. ದಿಲ್ಲಿಯ ಜಾಮಾ ಮಸೀದಿ ಮುಂಭಾಗದಲ್ಲಿ ನಿಂತು ತೆಗೆಸಿಕೊಂಡಿರುವ ಫೋಟೋ ದಲ್ಲಿ ಒಂದು ಸಂದೇಶವುಳ್ಳ ಹಾಳೆಯೊಂದನ್ನು ಹಿಡಿದು ಕೊಂಡಿದ್ದರು. ಅದರಲ್ಲಿ ಅವರು, “”ನಾನು ಭಾರತೀ ಯಳು. ಭಾರತದ ಸಂವಿಧಾನ ನೀಡಿರುವ ಜಾತ್ಯತೀತತೆಯನ್ನು ಗೌರವಿ ಸುತ್ತೇನೆ. ಆದರೆ, ಭಾರತದಲ್ಲಿ ಧರ್ಮದ ಹೆಸರಿನಲ್ಲಿ ಮುಸ್ಲಿಮರ ಮೇಲೆ ಆಗುತ್ತಿರುವ ಹಿಂಸಾಚಾರವನ್ನು ನಾನು ವಿರೋಧಿ ಸುತ್ತೇನೆ” ಎಂದು ಹೇಳಿಕೊಂಡಿದ್ದರು.

ಆದರೆ, ಈ ಫೋಟೋದ ಸಂದೇಶ ಬದಲಿಸಿರುವ ಪಾಕಿಸ್ಥಾನ್‌ ಡಿಫೆನ್ಸ್‌  ಫೋರಂ, ಕೌರ್‌  ಅವರು “”ನಾನು ಭಾರತೀಯಳು. ಆದರೂ ನಾನು ಭಾರತವನ್ನು ದ್ವೇಷಿಸುತ್ತೇನೆ…” ಎಂದು ಹೇಳಿ ಕೊಂಡಂತೆ ಬದಲಿಸಿ, ಪುನಃ ಅಂತರ್ಜಾಲಕ್ಕೆ ಹರಿಬಿಟ್ಟಿತ್ತು. ಹಾಗಾಗಿ, ನಿಯಮಗಳ ಅನುಸಾರ ಟ್ವಿಟರ್‌ ಸಂಸ್ಥೆ ಅದನ್ನು ಅಮಾನತುಗೊಳಿಸಿ ತಕ್ಕ ಶಾಸ್ತಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next