Advertisement

ಮಾರ್ಚ್ ‌ನಲ್ಲಿ 3.22 ಲಕ್ಷ ವಾಹನಗಳ ಮಾರಾಟ ಮಾಡಿದ ಟಿವಿಎಸ್ ..!

02:54 PM Apr 03, 2021 | |

ನವ ದೆಹಲಿ :  ದೇಶದಲ್ಲಿ ಕೋವಿಡ್  ಲಾಕ್‌ ಡೌನ್ ಬಳಿಕ ಆಟೊಮೊಬೈಲ್ ಕ್ಷೇತ್ರ ಚೇತರಿಕೆ ಕಾಣುತ್ತಿದ್ದು, , ಮಾರ್ಚ್‌ ತಿಂಗಳಲ್ಲಿ ಭರ್ಜರಿ ಮಾರಾಟ ನಡೆದಿದೆ ಎಂದು ತಿಳಿದು ಬಂದಿದೆ.

Advertisement

ಭಾರತದ ಮೋಟಾರು ವಾಹನ ತಯಾರಕ ಕಂಪೆನಿ ಟಿವಿಎಸ್ ಕೋವಿಡ್-19 ಸಂದರ್ಭದ ನಡುವೆಯೂ ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಿದೆ  ಎಂಬ ವರದಿಯಾಗಿದೆ.

ಓದಿ : ವರದಿಗಾರ್ತಿಯ ಮೈಕ್ ಕಿತ್ತುಕೊಂಡು ಪರಾರಿಯಾದ ನಾಯಿ : ಮುಂದೆ ಏನಾಯ್ತು ನೀವೇ ನೋಡಿ!

ಟಿವಿಎಸ್ ಮೋಟಾರ್ ಕಂಪನಿ, ಕೋವಿಡ್ ಸಾಂಕ್ರಾಮಿಕ ಪರಿಣಾಮದ ಹೊರತಾಗಿಯೂ ಮಾರಾಟದ ಬೆಳವಣಿಗೆಯ ವರದಿಯನ್ನು ಬಿಡುಗಡೆ ಮಾಡಿದೆ. ಟಿವಿಎಸ್  ದ್ವಿಚಕ್ರ ವಾಹನವು ಮಾರ್ಚ್ ತಿಂಗಳಲ್ಲಿ ಆಕರ್ಷಕ ಮಾರಾಟವನ್ನು ಕಂಡಿದೆ ಎಂಬುವುದನ್ನು ಟಿವಿಎಸ್ ಬಿಡುಗಡೆ ಮಾಡಿದ ವರದಿಯಲ್ಲಿ ಕಾಣಬಹುದಾಗಿದೆ.

ಮಾರ್ಚ್ ತಿಂಗಳಲ್ಲಿ ಕಂಪನಿಯು ಒಟ್ಟು 3,22,683 ವಾಹನಗಳನ್ನು (ದೇಶೀಯ + ರಫ್ತು) ಮಾರಾಟ ಮಾಡಿದೆ. ಕಂಪನಿಯು ಈ ಹಿಂದೆ 2020 ರ ಮಾರ್ಚ್‌ನಲ್ಲಿ 1,44,739 ಯುನಿಟ್‌ ಗಳನ್ನು ಮಾರಾಟ ಮಾಡಿತ್ತು.

Advertisement

ಮಾರ್ಚ್ 2020 ಕ್ಕೆ ಹೋಲಿಸಿದರೆ, ಕಂಪನಿಯ ಮಾರಾಟವು ಈ ವರ್ಷದ ಮಾರ್ಚ್ ತಿಂಗಳಲ್ಲಿ ಶೇಕಡಾ 12.3 ರಷ್ಟು ಜಾಸ್ತಿಯಾಗಿದೆ ಎಂದು ಕಂಪೆನಿ ಬಿಡುಗಡೆ ಮಾಡಿದ ವರದಿ ಹೇಳುತ್ತದೆ.

ಓದಿ :  ಐಪಿಎಲ್ ಗೆ ಕೋವಿಡ್ ಕಾಟ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಆಟಗಾರನಿಗೆ ಕೋವಿಡ್ ಪಾಸಿಟಿವ್

Advertisement

Udayavani is now on Telegram. Click here to join our channel and stay updated with the latest news.

Next