Advertisement

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

03:42 PM Jun 19, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಹೈಟೆಕ್‌ ಟಿವಿಎಸ್‌ ಮತ್ತು ಟಿವಿಎಸ್‌ ಮೋಟಾರ್‌ ಕಂಪನಿಯ ಬಹು ನಿರೀಕ್ಷಿತ ಟಿವಿಎಸ್‌ ಅಪಾಚೆ ಆರ್‌ಟಿಆರ್‌
160 ಬ್ಲ್ಯಾಕ್‌ ಎಡಿಷನ್‌ ನೂತನ್‌ ಬೈಕ್‌ ಅನ್ನು ನಗರದ ಗುಳೇದ ಟಿವಿಎಸ್‌ ಶೋರೂಂನಲ್ಲಿ ಮಂಗಳವಾರ ಮಾರುಕಟ್ಟೆಗೆ
ಬಿಡುಗಡೆಗೊಳಿಸಲಾಯಿತು.

Advertisement

ಬಿಟಿಡಿಎ ಸಭಾಪತಿಗಳೂ ಆಗಿರುವ ಶಾಸಕ ಎಚ್‌.ವೈ. ಮೇಟಿ ನೂತನ ಬೈಕ್‌ ಬಿಡುಗಡೆಗೊಳಿಸಿ ಮಾತನಾಡಿ, ಟಿವಿಎಸ್‌ ಕಂಪನಿಯ ಹೊಸ ಮಾದರಿಯ ಮತ್ತು ಆಟೋಮೊಟಿವ್‌ ಉದ್ಯಮದಲ್ಲಿ ಗುಣಮಟ್ಟ  ಕಾಯ್ದುಕೊಂಡಿದೆ. ಮಾರುಕಟ್ಟೆಗೆ ಹೊಸ
ಮಾದರಿಯ ಈ ಬೈಕ್‌ ಗಮನ ಸೆಳೆಯುವಂತಿದೆ ಎಂದರು.

ಗುಳೇದ ಟಿವಿಎಸ್‌ ಶೋ ರೂಂನ ಹಣಮಂತ ಗುಳೇದ ಮಾತನಾಡಿ, ನೂತನ ಅಪಾಚೆ ಆರ್‌ಟಿಆರ್‌ 160 ಬೈಕ್‌ ಎರಡು ಸರಣಿಗಳಲ್ಲಿ ಲಭ್ಯವಿದೆ. ಗ್ರಾಹಕರು ಬೈಕ್‌ ಮಾದರಿ ವೀಕ್ಷಣೆ ಹಾಗೂ ಖರೀದಿಗೆ ನಮ್ಮ ಶೋರೂಂ ಗೆ ಭೇಟಿ ನೀಡಬಹುದು ಎಂದು ತಿಳಿಸಿದರು.

ಗುಳೇದ ಶೋ ರೂಂನ ಮಾಲಿಕ ಸಿದ್ಧಲಿಂಗಪ್ಪ ಗುಳೇದ, ಡಿವೈಎಸ್‌ಪಿ ಪಂಪನಗೌಡ, ನವನಗರ ಠಾಣೆ ಸಿಪಿಐ ರಾಮನಗೌಡ ಬಿರಾದಾರ, ನಗರ ಠಾಣೆ ಪಿಐ ಗುರುನಾಥ ಚವ್ಹಾಣ, ಗ್ರಾಮೀಣ ಠಾಣೆ ಪಿಎಸ್‌ಐ ಸಂಗಳದ, ಮುಖಂಡರಾದ
ದ್ಯಾಮಣ್ಣ ಗಾಳಿ, ಎಸ್‌.ಎನ್‌. ರಾಂಪುರ, ಹಾಜಿಸಾಬ ದಂಡಿನ, ರಜಾಕ ಹಳ್ಳೂರ, ವಿಜಯಕುಮಾರ ಕಮತಗಿ, ಮಲ್ಲಿಕಾರ್ಜುನ
ಶಿರೂರ, ಬಸವರಾಜ ಭಗತಿ, ಹನಮಂತ ರಾಕುಂಪಿ, ಮಲ್ಲು ಜಕಾತಿ, ಕಾಂತು ಗುಳೇದ
ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next