ರಬ್ಬರ್ ಕೂಲಿ ಕಾರ್ಮಿಕನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು
Team Udayavani, Dec 18, 2022, 7:05 AM IST
ಕಾರ್ಕಳ: ಕಾರ್ಕಳ ನಗರ ಠಾಣೆಯಲ್ಲಿ ತಿಂಗಳಲ್ಲಿ 2 ತಿಂಗಳ ಹಿಂದೆ ದಾಖಲಾಗಿದ್ದ ಕೂಲಿ ಕಾರ್ಮಿಕನೋರ್ವನ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣ ತಿರುವು ಪಡೆದಕೊಂಡಿದ್ದು. ಮೃತ ವ್ಯಕ್ತಿಯ ಪತ್ನಿ ನೀಡಿದ ದೂರಿನಂತೆ ಮೂವರ ಮೇಲೆ ಕಾರ್ಕಳ ನಗರ ಠಾಂಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್. ವಿವೇೆಕಾನಂದ ಶೆಣೈ ಮತ್ತು ದಿಲೀಪ್ ಅವರ ಲೀಸಿನ ರಬ್ಬರ್ ತೋಟದಲ್ಲಿ ರಬ್ಬರ್ ಪ್ಲಾಂಟೇಶನ್ ಕೆಲಸಕ್ಕಿದ್ದ ಕೇರಳ ಮೂಲದ ಕೆ. ಗೋಪಿನಾಥನ್ ನಾಯರ್ ಅಲ್ಲಿಯೆ ವಾಸವಾಗಿದ್ದ. ಆತನ ಶವ ಸುಟ್ಟ ಸ್ಥಿತಿಯಲ್ಲಿ ಅಂದು ಪತ್ತೆಯಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು. ಮೃತರ ಪತ್ನಿ ಸುಧಾ ಕೆ.ಎಸ್. ಅವರು ಆರ್. ವಿವೇಕಾನಂದ ಶೆಣೈ ಮತ್ತು ದಿಲೀಪ್ ಜಿ. ಹಾಗೂ ಇನ್ನೊಬ್ಬರ ವಿರುದ್ಧ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ಅವರು ಆಪಾದಿತರು ಗಂಡನಿಗೆ ಸರಿಯಾಗಿ ಸಂಬಳವನ್ನು ನೀಡುತ್ತಿರಲಿಲ್ಲ. ಅಗತ್ಯವಿದ್ದಾಗ ರಜೆಯನ್ನು ನೀಡದೆ ತೊಂದರೆ ನೀಡುತ್ತಿದ್ದರು.
ಕೆಲಸವನ್ನು ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ತಾನು ಗಂಡನಿಗೆ ಕರೆ ಮಾಡಿದಾಗೆಲ್ಲ ಕೆಲಸ ಬಿಟ್ಟು ಹೋಗುತ್ತೇನೆಂದು ಹೇಳುತ್ತಿದ್ದರು. ಇದರಿಂದ ಹೆದರಿ ವಾಯ್ಸ ಸಂದೇಶಗಳನ್ನು ಕಳುಹಿಸಿ 2-3 ಮೊಬೈಲ್ ನಂಬರುಗಳನ್ನು ಕಳುಹಿಸುತ್ತೇನೆ ಇವುಗಳನ್ನು ಮೊಬೈಲ್‌ನಲ್ಲಿ ಸೇವ್ ಮಾಡಿ ಇಟ್ಟುಕೊಂಡು ಸಂಜೆಯ ಸಮಯ ತಾನು ಫೋನ್ ಕರೆ ಸ್ವೀಕರಿಸದಿದ್ದರೆ ಈ ನಂಬರ್‌ಗಳನ್ನು ಪೋಲೀಸರಿಗೆ ತಿಳಿಸಿ ದೂರು ನೀಡುವಂತೆ ತಿಳಿಸಿದ್ದರು. ಅ. 19ರಂದು ದಿಲೀಪ್ ಫೋನ್ ಕರೆ ಮಾಡಿ ನಿಮ್ಮ ಗಂಡ ಕಾಣಿಸುತ್ತಿಲ್ಲ ಮಿಸ್ಸಿಂಗ್ ದೂರು ನೀಡಲು ಅವರ ಆಧಾರ್ ಕಾರ್ಡ್ ಕಳುಹಿಸಿ ಎಂದು ಹೇಳಿ ನಂತರ ಗಂಡ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಎಂದು ತಿಳಿಸಿದ್ದರು.
ಪುತ್ರ ಬಂದು ನೋಡಿದಾಗ ಪತಿಯ ಶವ ಎಸ್ಟೇಟ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತಪಟ್ಟ ಬಗ್ಗೆ ತಿಳಿಯಿತು. ಪತಿ ಪೆಟ್ರೋಲ್ ಸುರಿದುಕೊಂಡು ಕ್ರೂರ ರೀತಿಯಲ್ಲಿ ಆತ್ಮಹತ್ಯೆ ಮಾಡುವ ಯಾವುದೇ ಮನಸ್ಥಿತಿ ಇಲ್ಲದಿದ್ದು, ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯೊಂದಿಗೆ ಗಂಡನಿಗೆ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಅದರಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದೆ.