Advertisement

ಆರ್ಥಿಕತೆಯ ಟರ್ನಿಂಗ್‌ ಪಾಯಿಂಟ್‌ ಜಿಎಸ್‌ಟಿ

03:45 AM Jun 06, 2017 | Team Udayavani |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯು ದೇಶದ ಆರ್ಥಿಕತೆಯ ಟರ್ನಿಂಗ್‌ ಪಾಯಿಂಟ್‌ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

Advertisement

ದೇಶಾದ್ಯಂತ ಜುಲೈ 1ರಂದು ಜಿಎಸ್‌ಟಿ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಸೋಮವಾರ ದೆಹಲಿಯಲ್ಲಿ ಮೋದಿ ಅವರು ಇದರ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಏಕರೂಪದ ತೆರಿಗೆಯು ದೇಶದ ಆರ್ಥಿಕತೆಗೆ ಮಹತ್ವದ ತಿರುವು ತಂದುಕೊಡಲಿದೆ. ಇದು ದೇಶದ ಇತಿಹಾಸದಲ್ಲೇ ಅಭೂತಪೂರ್ವ ಕ್ಷಣ. ಒಂದು ದೇಶ, ಒಂದು ಮಾರುಕಟ್ಟೆ ಮತ್ತು ಒಂದೇ ತೆರಿಗೆ ವ್ಯವಸ್ಥೆಯು ಜನಸಾಮಾನ್ಯನಿಗೆ ಸಾಕಷ್ಟು ಅನುಕೂಲ ಕಲ್ಪಿಸಲಿದೆ,’ ಎಂದಿದ್ದಾರೆ.

ಇದೇ ವೇಳೆ, ಜಿಎಸ್‌ಟಿಗೆ ಸಂಬಂಧಿಸಿದ ಐಟಿ ವ್ಯವಸ್ಥೆಯ ಸೈಬರ್‌ ಭದ್ರತೆ ಕುರಿತು ಗರಿಷ್ಠ ನಿಗಾ ವಹಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಐಟಿ ಮೂಲ ಸೌಕರ್ಯ, ಅಧಿಕಾರಿಗಳಿಗೆ ತರಬೇತಿ, ಬ್ಯಾಂಕುಗಳೊಂದಿಗೆ ಸಂಪರ್ಕ, ಮಾಹಿತಿ ಭದ್ರತಾ ವ್ಯವಸ್ಥೆಗಳ ಕುರಿತು ಮೋದಿ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next