ಅಂಕಾರಾ/ನವದೆಹಲಿ: ಟರ್ಕಿಯಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರೀಪ್ ತಯ್ಯಿಪ್ ಎಡೋìಗನ್ ಜಯಗಳಿಸಿದ್ದಾರೆ. ಮತ ಎಣಿಕೆ ಪ್ರಗತಿಯಲ್ಲಿ ಇರುವಂತೆಯೇ ಎರ್ಡೋಗನ್ ಅವರಿಗೆ ಶೇ.52.16 ಮತಗಳು ಪ್ರಾಪ್ತವಾಗಿವೆ. ಅವರ ಸಮೀಪದ ಪ್ರತಿಸ್ಪರ್ಧಿ ಕೆಮಾಲ್ ಕಿಲ್ಸಿಡಾರೋಗ್ಲು ಅವರಿಗೆ ಶೇ.47.84 ಮತಗಳು ಬಂದಿವೆ. ದೇಶದ ಚುನಾವಣಾ ಆಯೋಗ ಕೂಡ ಹಾಲಿ ಅಧ್ಯಕ್ಷರ ಜಯವನ್ನು ದೃಢೀಕರಿಸಿದೆ. ಮತ್ತೂಂದು ಬಾರಿ ಐದನೇ ವರ್ಷದ ಆಳ್ವಿಕೆಯನ್ನು ಪಡೆದುಕೊಂಡಿದ್ದಾರೆ. 2014 ಆ.28ರಿಂದ ಅವರು ಈ ಹುದ್ದೆಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಎರ್ಡೋಗನ್ ಮರು ಆಯ್ಕೆಗೆ ಅಭಿನಂದನೆ ಸಲ್ಲಿಸಿ, ಎರಡೂ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಮತ್ತು ಜಗತ್ತಿನ ವಿಚಾರಗಳಲ್ಲಿ ಪರಸ್ಪರ ಸಹಕಾರ ಮುಂದುವರಿಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
TURKEY: ಅಧಿಕಾರ ಉಳಿಸಿಕೊಂಡ ಎರ್ಡೋಗನ್
10:30 PM May 29, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.