Advertisement

ತಳಗದ್ದೆ ಬೇಣದಲ್ಲಿ ಪತ್ತೆಯಾದ ಸುರಂಗ

04:58 PM May 20, 2019 | pallavi |

ಕುಮಟಾ: ತಾಲೂಕಿನ ಅಳಕೋಡ ಪಂಚಾಯತ ವ್ಯಾಪ್ತಿಯ ಬಂಡಿವಾಳದ ತಳಗದ್ದೆ ಒಳಬೇಣದಲ್ಲಿ ಆಕಸ್ಮಿಕವಾಗಿ ಸುರಂಗ ವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Advertisement

ಹೆಬ್ಟಾರ ಮನೆತನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಕೆಂಪುಕಲ್ಲು ತೆಗೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೆಂಪುಕಲ್ಲು ತೆಗೆಯುವ ಸ್ಥಳದಲ್ಲಿ ಜೆಸಿಬಿಯಿಂದ ಸ್ವಚ್ಛಗೊಳಿಸುವಾಗ ಭೂಮಿಯೊಳಗೆ ವಿಶಾಲವಾದ ಟೊಳ್ಳು ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಯಂತ್ರದಲ್ಲಿ ಆ ಸ್ಥಳ ಕೊರೆಯುವಾಗ ಸುರಂಗದ ಮೇಲ್ಭಾಗ ಕುಸಿದು ಚಿಕ್ಕ ರಂಧ್ರವಾಗಿದೆ. ಸ್ಥಳೀಯರು ಕುತೂಹಲದಿಂದ ಆ ರಂಧ್ರವನ್ನು ದೊಡ್ಡದು ಮಾಡಿ ಒಳಗಿಳಿದು ಪರಿಶೀಲಿಸಿದ್ದಾರೆ.

ಇದು ಬೃಹತ್‌ ಸುರಂಗವಾಗಿದ್ದು, ಒಳಗೆ ಹೆಡ್‌ಲೈಟ್ನಿಂದ ಬೆಳಕು ಹಾಯಿಸಿದರೆ 250 ಮೀ.ಗೂ ಅಧಿಕ ದೂರ ಹೋಗುತ್ತದೆ. ಒಳಗಡೆ ಉಸಿರಾಡಲು ಕಷ್ಟವಾಗುವುದರಿಂದ ಅಪಾಯದ ಭಯವಿದೆ. ಇನ್ನು ಕೆಳಗಡೆ ಹೂಳು ತುಂಬಿರುವುದರಿಂದ ಕಾಲು ಹುಗಿಯುತ್ತದೆ. ಆದ್ದರಿಂದ ಸುರಂಗ ಎಷ್ಟು ಉದ್ದವಿದೆ ಎಂದು ನೋಡಲು ಸಾಧ್ಯವಾಗಿಲ್ಲ. ಸುರಂಗದ ಗೋಡೆಗಳು ಸಪಾಟಾಗಿದ್ದು ಮಳೆಗಾಲದಲ್ಲಿ ಬೃಹತ್‌ ನೀರಿನ ಹರಿವಿನ ಲಕ್ಷಣ ಹೊಂದಿರಬಹುದು ಎಂದು ಸ್ಥಳೀಯರು ಉಹಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಅಳಕೋಡ ಗ್ರಾಪಂ ವ್ಯಾಪ್ತಿಯ ಕಂದಳ್ಳಿ, ಮಾಸ್ತಿ ಹಳ್ಳದಂತಹ ಸ್ಥಳಗಳಲ್ಲಿ ಪುರಾತನ ದೇವಾಲಯಗಳ ಹಾಗೂ ರಾಜ ಮನೆತನದ ಕೆಲ ಕುರುಹುಗಳು ದೊರೆತಿವೆ. ಬಂಡಿವಾಳದಲ್ಲಿ ಕಂಡು ಬಂದ ಸುರಂಗ ಮಾನವ ನಿರ್ಮಿತವೇ ಇರಬಹುದು ಎಂಬ ಅನುಮಾನವನ್ನು ಹಿರಿಯರು ವ್ಯಕ್ತಪಡಿಸಿದ್ದಾರೆ. ಆದರೆ ಭೂಮಿಯೊಳಗಿನ ನೀರಿನ ಹರಿವಿನ ನೈಸರ್ಗಿಕ ಟೊಳ್ಳು ಎಂಬುದು ಮೇಲ್ನೋಟಕ್ಕೆ ಅರ್ಥವಾಗುವಂಥದ್ದು. ಒಟ್ಟಾರೆ ಬಂಡಿವಾಳದ ಸುರಂಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ್ದಲ್ಲದೇ, ಜನರ ಆಕರ್ಷಣೆಯ ಸ್ಥಳವೂ ಹೌದು.

ಆಕಸ್ಮಿಕವಾಗಿ ಇಲ್ಲಿ ಕಂಡುಬಂದ ಸುರಂಗ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಸುರಂಗ ಸಂಪೂರ್ಣ ಲ್ಯಾಟ್ರೈಟ್ ಕಲ್ಲಿನಿಂದ ಕೂಡಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆಯೋ ಅಥವಾ ನೀರಿನ ಹರಿವಿನಿಂದ ಸೃಷ್ಟಿಯಾಗಿದೆಯೋ ಎಂಬುದು ತಿಳಿದಿಲ್ಲ. ಸುರಂಗದ ವಿಸ್ತೀರ್ಣವನ್ನು ತಜ್ಞರೇ ಕಂಡುಹಿಡಿಯಬೇಕಿದೆ.
• ಜಿ.ಎಸ್‌.ಹೆಬ್ಟಾರ, ಸ್ಥಳೀಯ ನಿವಾಸಿ

ಕುಮಟಾ: ತಾಲೂಕಿನ ಅಳಕೋಡ ಪಂಚಾಯತ ವ್ಯಾಪ್ತಿಯ ಬಂಡಿವಾಳದ ತಳಗದ್ದೆ ಒಳಬೇಣದಲ್ಲಿ ಆಕಸ್ಮಿಕವಾಗಿ ಸುರಂಗ ವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Advertisement

ಹೆಬ್ಟಾರ ಮನೆತನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಕೆಂಪುಕಲ್ಲು ತೆಗೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೆಂಪುಕಲ್ಲು ತೆಗೆಯುವ ಸ್ಥಳದಲ್ಲಿ ಜೆಸಿಬಿಯಿಂದ ಸ್ವಚ್ಛಗೊಳಿಸುವಾಗ ಭೂಮಿಯೊಳಗೆ ವಿಶಾಲವಾದ ಟೊಳ್ಳು ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಯಂತ್ರದಲ್ಲಿ ಆ ಸ್ಥಳ ಕೊರೆಯುವಾಗ ಸುರಂಗದ ಮೇಲ್ಭಾಗ ಕುಸಿದು ಚಿಕ್ಕ

Advertisement

Udayavani is now on Telegram. Click here to join our channel and stay updated with the latest news.

Next