Advertisement

ಆತ್ಮಹತ್ಯೆಗೂ ಮುನ್ನ ತುನಿಶಾ –ಶಿಜಾನ್‌ ನಡುವೆ ಜಗಳ: ದೃಶ್ಯಗಳು ಸಿಸಿ ಕೆಮರಾಯಲ್ಲಿ ಸೆರೆ

11:43 PM Dec 30, 2022 | Team Udayavani |

ಮುಂಬಯಿ: ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೂ ಮುನ್ನ ಆಕೆ ಮತ್ತು ಆಕೆಯ ಬಾಯ್‌ಫ್ರೆಂಡ್‌ ಶಿಜಾನ್‌ ಖಾನ್‌ ನಡುವೆ ಜಗಳ ನಡೆದಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

Advertisement

ಡಿ. 24ರಂದು ತುನಿಶಾ-ಶಿಜಾನ್‌ ನಡುವೆ ನಡೆದ ವಾಗ್ವಾದದ ದೃಶ್ಯಗಳು ಸಿಸಿ ಕೆಮರಾಯಲ್ಲಿ ಸೆರೆಯಾಗಿದ್ದು, ಅವುಗಳನ್ನು ಮುಂಬಯಿಯ ವಾಲಿವ್‌ ಠಾಣೆ ಪೊಲೀ ಸರು ವಶಪಡಿಸಿಕೊಂಡಿದ್ದಾರೆ. ಯಾವ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಯಿತು ಎಂಬುದು ತಿಳಿದು ಬಂದಿಲ್ಲ. ಈಗಾಗಲೇ ಸಹ ನಟ ಶಿಜಾನ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಇನ್ನೊಂದೆಡೆ ತನಿಖೆ ನಡೆಸುತ್ತಿರುವ ಪೊಲೀ ಸರು ಸ್ಥಳೀಯ ಕೋರ್ಟ್‌ಗೆ ಅರಿಕೆ ಮಾಡಿ, ತುನಿಶಾ ಖನ್ನತೆಗೆ ಗುರಿಯಾ ಗಿದ್ದರು. ಶಿಜಾನ್‌ ಖಾನ್‌ ಆಕೆಯನ್ನು ಕೇವಲ ನೆಪ ಮಾತ್ರಕ್ಕೆ ಆರೈಕೆ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಶಿಜಾನ್‌ನನ್ನು ಇನ್ನೂ ಎರಡು ದಿನಗಳ ಕಾಲ ವಶಕ್ಕೆ ಒಪ್ಪಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಪೊಲೀಸರ ಮನವಿ ಆಲಿಸಿದ ಕೋರ್ಟ್‌ ಶನಿವಾರದ ವರೆಗೆ ಕಸ್ಟಡಿ ವಿಸ್ತರಿಸಿ ಆದೇಶ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next