Advertisement

ತುಂಗಭದ್ರಾ ಜಲಾಶಯ ಭರ್ತಿ: 6635 ಕ್ಯೂಸೆಕ್  ನೀರು ನದಿಗೆ

05:03 PM Jul 25, 2021 | Team Udayavani |

ಬಳ್ಳಾರಿ (ಹೊಸಪೇಟೆ): ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭಾನುವಾರ ಭರ್ತಿಯಾಗಿದ್ದು, ಹೆಚ್ವುವರಿ 6635 ಕ್ಯೂಸೆಕ್  ನೀರನ್ನು 10  ಕ್ರಷ್ಟ್‌ ಗೇಟ್ ಗಳನ್ನು ತೆರೆಯುವ‌ ಮೂಲಕ ನದಿಗೆ ಹರಿಸಲಾಯಿತು.

Advertisement

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ‌‌‌ ಎಡಬಿಡದೇ‌ ಸುರಿಯುತ್ತಿರುವ ಆಧಿಕ‌ ಮಳೆಯ ಪರಿಣಾಮ  ಶಿವಮೊಗ್ಗ ಜಿಲ್ಲೆಯ‌ ತುಂಗ‌ ಹಾಗೂ ಭದ್ರಾ ಜಲಾಶಯ ಎರಡೂ‌ ಭರ್ತಿಯಾದ‌ ಹಿನ್ನಲೆಯಲ್ಲಿ ಹೆಚ್ಚುವರಿ‌‌ ನೀರನ್ನು ನದಿಗೆ ಹರಿಬಿಡಲಾಗಿದೆ. ಹೀಗಾಗಿ  ಜಲಾಶಯದ ಒಳ ಹರಿವು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಇದನ್ನೂ ಓದಿ: ‘ಭಜರಂಗಿ ಭಾಯಿಜಾನ್’ ಗೆ ನಿರ್ದೇಶನ ಮಾಡಲು ರಾಜಮೌಳಿ ‘ನೋ’ ಎಂದಿದ್ದೇಕೆ ?

ಶನಿವಾರವೇ ಜಲಾಶಯದ ಒಳ ಹರಿವು 1.20 ಲಕ್ಷ ಕ್ಯೂಸೆಕ್ ದಾಟಿದ ಪರಿಣಾಮ ಡ್ಯಾಂನಿಂದ ನದಿಗೆ ಹೆಚ್ಚುವರಿ ನೀರು ಹರಿಬಿಡುವ ಸೂಚನೆ‌ ನೀಡಿದ್ದ ತುಂಗಭದ್ರಾ ಮಂಡಳಿ ಮುಂಜಾಗ್ರತ ಕ್ರಮವಾಗಿ ನದಿಪಾತ್ರದ ಜನ-ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ‌ ನೀಡಿತ್ತು.

ಸದ್ಯ‌ ಜಲಾಶಯದ ಒಳ ಹರಿವು 1.73 ಲಕ್ಷ  ಕ್ಯೂಸೆಕ್‌‌ ಹರಿದು ಬರುತ್ತಿದೆ. 103 ಟಿಎಂಸಿ ಸಾಮಾರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 83.277 ಟಿಎಂಸಿ‌ ನೀರು ಸಂಗ್ರಹವಿದೆ.  ಗರಿಷ್ಠ‌ ಮಟ್ಟ 1633 ಅಡಿಗಳು ಇದ್ದು, ಇಂದಿನ‌ ಮಟ್ಟ 1628.15 ಅಡಿಯಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next