ತೀರ್ಥಹಳ್ಳಿ : ದನದ ಕುತ್ತಿಗೆ ಕಡಿದು ತಲೆಯ ಭಾಗವನ್ನು ತುಂಗಾ ನದಿಗೆ ದುಷ್ಕರ್ಮಿಗಳು ಎಸೆದಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಸ್ಥಳೀಯರು ಸ್ನಾನ ಮಾಡಲು ತುಂಗಾ ನದಿಯ ಹೊಳೆಗೆ ಇಳಿದಾಗ ಘಟನೆ ಬೆಳಕಿಗೆ ಬಂದಿದೆ. ತುಂಗಾನದಿಯಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಚಕ್ರತೀರ್ಥದಲ್ಲಿ ಈ ಅಮಾನವೀಯ ಘಟನೆ ಜರುಗಿದೆ.
ಶಂಖತೀರ್ಥ, ಚಕ್ರತೀರ್ಥ, ಗದಾತೀರ್ಥ, ಪದ್ಮತೀರ್ಥ ಎಂಬ ಪವಿತ್ರ ತೀರ್ಥಗಳ ಸಮಾಗಮ ಆಗುವ ತುಂಗಾ ನದಿಯ ರಾಮೇಶ್ವರ ದೇವಸ್ಥಾನದ ಹಿಂಭಾಗದ ಸ್ಥಳಗಳಲ್ಲಿ ಈ ಘಟನೆ ನೆಡೆದಿದ್ದು ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ದುಷ್ಕರ್ಮಿಗಳು ಹೋಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸಿ ಪಿ ಐ ಅಶ್ವಥ್ ಗೌಡ, ಪ. ಪಂ ಅಧ್ಯಕ್ಷೆ ಸುಶೀಲ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಕೋಸ್, ಆರೋಗ್ಯ ಅಧಿಕಾರಿ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಪತ್ನಿಗೆ ಕ್ಯಾನ್ಸರ್: ನಿಮಗಾಗಿ ಕಾದಿರುವೆ ಎಂದು ಟ್ವೀಟ್ ಮಾಡಿದ ಕೌರ್