Advertisement

ಡ್ರೋನ್‌ಗಳ ಮಹಾಪ್ರದರ್ಶನ, ಶಾಸ್ತ್ರೀಯ ರಾಗಗಳ ಸಮ್ಮಿಲನ

09:16 PM Jan 29, 2023 | Shreeram Nayak |

ನವದೆಹಲಿ: 74ನೇ ಗಣರಾಜ್ಯೋತ್ಸವ ನಿರ್ಗಮನ ಪಥ ಸಂಚಲನ ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ವಿಜಯ್‌ಚೌಕ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.

Advertisement

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವರಾದ ರಾಜನಾಥ ಸಿಂಗ್‌ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ 4 ದಿನಗಳ ಅವಧಿಯ ಗಣರಾಜ್ಯೋತ್ಸವ ಆಚರಣೆಗೆ ಈ ಮೂಲಕ ತೆರೆಬಿದ್ದಿದೆ. ಬೀಟಿಂಗ್‌ ರಿಟ್ರೀಟ್‌ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕಳೆಗಟ್ಟಿದ್ದು, ಸ್ವದೇಶಿ ನಿರ್ಮಿತ ಡ್ರೋನ್‌ಗಳ ಮಹಾಪ್ರದರ್ಶನ ಸೇರಿದಂತೆ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು.

3,500 ದೇಶಿ ಡ್ರೋನ್‌ಗಳ ಶೋ
ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರದರ್ಶನ ಆಯೋಜಿಸಿದ್ದಂತೆಯೇ, ನಿರ್ಗಮನ ಪಥ ಸಂಚಲನದಲ್ಲಿ ದೇಶಿ ನಿರ್ಮಿತ ಡ್ರೋನ್‌ಗಳ ಶೋ ನಡೆಸಲಾಗಿದೆ. ಆತ್ಮನಿರ್ಭರ ಭಾರತದ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ 3,500 ಸ್ವದೇಶಿ ನಿರ್ಮಿತ ಡ್ರೋನ್‌ಗಳು ರಾಷ್ಟ್ರೀಯ ವ್ಯಕ್ತಿಗಳ ಚಿತ್ರವನ್ನು ಸೇರಿದಂತೆ ವಿವಿಧ ರೂಪದಲ್ಲಿ ಹಾರಾಟ ನಡೆಸುವ ಮೂಲಕ ನೋಡುಗರು ಹುಬ್ಬೇರಿಸುವಂತೆ ಮಾಡಿದವು.

ಭದ್ರತಾ ಪಡೆಗಳಿಂದ ಶಾಸ್ತ್ರೀಯ ಸಂಗೀತ
ಭಾರತೀಯ ಭದ್ರತಾ ಪಡೆಗಳ ವಿವಿಧ ವಿಭಾಗಗಳು ಭಾರತೀಯ ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳ ಮೂಲಕ ಬ್ಯಾಂಡ್‌ಗಳನ್ನು ನುಡಿಸಿದವು. ಅಗ್ನಿವೀರ್‌, ಅಲ್ಮೋರಾ, ಕೇದಾರ್‌ನಾಥ್‌, ಸಂಗಮ್‌ ದುರ್‌, ಕ್ವೀನ್‌ ಆಫ್ ಸಾತು³ರ, ಭಾಗೀರಥಿ ಕೊಂಕಣಮ್‌ ಸುಂದರಿ ರಾಗಗಳು ಮೈನವಿರೇಳಿಸುವಂತೆ ಮಾಡಿದವು.

ಯಾವ ಪಡೆಗಳಿಂದ ಯಾವೆಲ್ಲ ಹಾಡು ?
ವಾಯುಪಡೆ: ಅಪ್ರಜೆ ಅರ್ಜುನ್‌, ಚರಕ, ವಾಯುಶಕ್ತಿ, ಸ್ವದೇಶಿ
ನೌಕಾಪಡೆ: ಏಕ್ಲಾ ಚೋಲೋ ರೇ, ಹಮ್‌ ತಯಾರ್‌ ಹೈ, ಜೈ ಭಾರತಿ
ಭಾರತೀಯ ಸೇನೆ: ಶಂಖನಾದ್‌, ಶೇರ್‌ಎ ಜವಾನ್‌, ಭೂಪಾಲ್‌, ಅಗ್ರಣಿ ಭಾರತ್‌, ಯಂಗ್‌ ಇಂಡಿಯಾ, ಕದಮ್‌-ಕದಮ್‌ ಬಧಯೇ ಜಾ, ಡ್ರಮ್ಮರ್ಸ್‌ ಕಾಲ್‌, ಏ ಮೇರ ವತನ್‌ ಕೇ ಲೋಗೋ

Advertisement

ವೈಶಿಷ್ಟ್ಯ
*ಮೊದಲಬಾರಿಗೆ ಉತ್ತರ -ದಕ್ಷಿಣ ಬ್ಲಾಕ್‌ನಲ್ಲಿ 3ಡಿ ಅನಾಮಾರ್ಫಿಕ್‌
*ನವೋದ್ಯಮ, ದೇಶದ ತಾಂತ್ರಿಕ ಬೆಳವಣಿಗೆಗೆ ಡ್ರೋನ್‌ ಸಾಕ್ಷಿ
* ಅಗ್ನಿವೀರ ಶಾಸ್ತ್ರೀಯ ಸಂಗೀತದ ಮೂಲಕ ಚಾಲನೆ
* ಸಾರೇ ಜಹಾನ್‌ ಸೇ ಅಚ್ಚಾ ಮೂಲಕ ಕಾರ್ಯಕ್ರಮ ಸಮಾಪ್ತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next