Advertisement

27ರಂದು ತುಮಕೂರಿನಲ್ಲಿ ಉದ್ಯೋಗ ಮೇಳ

05:09 PM Apr 14, 2017 | |

ತುಮಕೂರು: ತುಮಕೂರು ವಿಶ್ವ ವಿದ್ಯಾಲಯದ ಕೌಶಲ್ಯಾಭಿವೃದ್ಧಿ ಕೇಂದ್ರ ದ ವತಿಯಿಂದ ಏ.27 ರ ಬೆಳಗ್ಗೆ 9 ಗಂಟೆಯಿಂದ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಯೋಜಕ ಡಾ.ನೂರ್‌ ಅಫಾj ತಿಳಿಸಿದರು.

Advertisement

 ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕೌಶಲ್ಯಾಭಿವೃದ್ಧಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ 3500 ಕ್ಕೂ ಹೆಚ್ಚು ಪದವಿ ಪಡೆದು ಅನೇಕ ಯುವಕ ಯುವತಿಯರು ಉದೋÂಗವಿಲ್ಲದೇ ಇದ್ದಾರೆ. ಅವರಿಗೆ ಉದ್ಯೋಗ ಕಲ್ಲಿಸಲು ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದರು.

ಉದ್ಯೋಗ ಮೇಳ ವಿವಿಯ ಡಾ.ಪಿ.ಸದಾನಂದಮಯ್ಯ ಕಟ್ಟಡದಲ್ಲಿ ಏರ್ಪಡಿಸಲಾಗಿದೆ. ಬ್ಯಾಂಕಿಂಗ್‌, ಐಟಿ, ರೀಟೇಲ್‌ ಮತ್ತು ಬಿಪಿಒ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸುಮಾರು 30ಕ್ಕಿಂತಲೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಸ್ನಾತಕ, ಸ್ನಾತಕೋತ್ತರ ಪದವಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ, ಬಿಸಿಎ, ಎಂಎ, ಎಂಕಾಂ, ಎಂಎಸ್ಸಿ, ಮತ್ತು ಎಂಬಿಎ ತೇರ್ಗಡೆ ಹೊಂದಿದ ಅಥವಾ ಅಂತಿಮ ವರ್ಷದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳ ಉಚಿತ ನೋಂದಣಿ ಆರಂಭವಾಗಿದ್ದು ಅರ್ಜಿಯನ್ನು ವಿವಿ ಅಂತಜಾìಲದಿಂದ ಡೌನ್‌ ಲೋಡ್‌ ಮಾಡುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಡಾ.ನೂರ್‌ ಅಫಾj ಸಂಯೋಜಕರು ಕೌಶಲ್ಯಾಭಿವೃದ್ಧಿ ಕೇಂದ್ರ ಇವರಿಗೆ ಸಲ್ಲಿಸಬಹುದು ಎಂದರು. 

ಈ ವರ್ಷ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಬೇಕು ಎನ್ನು ವುದು ನಮ್ಮ ಆಶಯ. ಇಲ್ಲಿ ನಮ್ಮದೇ ವಿಶ್ವವಿದ್ಯಾನಿಲಯದಲ್ಲಿ ಓದಿರಬೇಕೆಂದಿಲ್ಲ ಯಾವ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಅಥವಾ ಮಾಡಿದ ಅಭ್ಯರ್ಥಿಗಳೂ ಭಾಗವಹಿಸಬಹುದು ಎಂದು ನುಡಿದರು.

Advertisement

ಬೆಳಗ್ಗೆ 9ಕ್ಕೆ ನೋಂದಣಿ ಯಾಗಬೇಕು. ಸಂಜೆ ವೇಳೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಖಾತರಿ ಪತ್ರ ನೀಡಲಾಗುವುದು. ತಮ್ಮ ವ್ಯಕ್ತಿ ಪರಿಚಯ ಪತ್ರ, ಗುರುತಿನ ಪತ್ರ ತರುವುದು ಕಡ್ಡಾಯವಾಗಿದೆ ಎಂದು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next