Advertisement

ತುಳುನಾಡು ಮಾತೃಪ್ರಧಾನ ಪುಣ್ಯ ನೆಲ: ಡಾ|ಸುನೀತಾ

02:43 PM May 02, 2018 | Team Udayavani |

ಮಹಾನಗರ: ತುಳುನಾಡಿನಲ್ಲಿ ತಾಯಿಗೆ ವಿಶೇಷವಾದ ಗೌರವ ನೀಡಲಾಗುತ್ತದೆ. ಈ ಮೂಲಕ ತುಳುನಾಡಿನ ಮಣ್ಣು ಮಾತೃಪ್ರಧಾನ ಪುಣ್ಯ ನೆಲ ಎಂದು ಹಿರಿಯ ಸಾಹಿತಿ ಮುಂಬಯಿಯ ಡಾ| ಸುನೀತಾ ಎಂ. ಶೆಟ್ಟಿ ಹೇಳಿದರು. ಬಂಟರ ಯಾನೆ ನಾಡವರ ಮಾತೃಸಂಘ, ಮಹಿಳಾ ವಿಭಾಗ ಹಾಗೂ ತುಳುವೆರೆ ಆಯಾನ ಕೂಟದ ಸಹಯೋಗದೊಂದಿಗೆ
ಬಂಟ್ಸ್‌ಹಾಸ್ಟೆಲ್‌ನ ಬಂಟರ ಯಾನೆ ನಾಡವರ ಮಾತೃಸಂಘದಲ್ಲಿ ಮಂಗಳವಾರ ನಡೆದ ‘ಪಗ್ಗು ಪದಿನೆಣ್ಮ ಸಿರಿದಿನ’ ಕಾರ್ಯಕ್ರಮದಲ್ಲಿ ಅವರು ‘ತುಳು ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

Advertisement

ಭವ್ಯತೆ ಪ್ರದರ್ಶನವಾಗಬೇಕು
ತುಳುವರ ತಿಂಗಳು ಆರಂಭವಾಗುವುದೇ ಪಗ್ಗುವಿನ ಮೂಲಕ. ಬಿಸು ತುಳುವೆರೆ ಹೊಸ ವರ್ಷ. ಸಿರಿ ಎಂಬುದು ಸಂಪತ್ತು, ಏಳಿಗೆ ಅಥವಾ ಪ್ರಗತಿಯ ಸ್ಥೂಲ ನೋಟವೂ ಹೌದು. ಜತೆಗೆ ಸಿರಿ ತುಳುನಾಡಿನ ಆದರ್ಶ. ಇಂತಹ ಒಟ್ಟು ತುಳುನಾಡಿನ ವಿಚಾರಗಳ ಬಗ್ಗೆ ಮುಂದಿನ ಜನಮಾನಸಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಆಚರಣೆಗಳು ನಡೆಯುತ್ತಿರಬೇಕು. ಈ ಮೂಲಕ ತುಳುನಾಡಿನ ಭವ್ಯತೆ ಪ್ರದರ್ಶನವಾಗಬೇಕು ಎಂದರು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಕೆ.ಚಿನ್ನಪ್ಪ ಗೌಡ ಮುಖ್ಯ ಅತಿಥಿಗಳಾಗಿದ್ದರು. ಪ್ರಮುಖರಾದ ಡಾ| ರತಿದೇವಿ, ಜಯಲಕ್ಷ್ಮೀ ಹೆಗ್ಡೆ, ತುಳುವೆರೆ ಆಯಾನ ಕೂಟ ಅಧ್ಯಕ್ಷ ಡಾ| ರಾಜೇಶ್‌ ಮುಖ್ಯ ಅತಿಥಿಗಳಾಗಿದ್ದರು.

ಸಿರಿಪಾಡ್ಡನ ಉಳಿಸುವಲ್ಲಿ ವಿಶೇಷ ಸೇವೆ ಸಲ್ಲಿಸಿದ ಕರ್ಗಿ ಶೆಡ್ತಿ ಅಳದಂಗಡಿ, ಲೀಲಾ ಶೆಡ್ತಿ ಮಾಳ, ಕಾರ್ಕಳ, ವಿವಿಧ ಕ್ಷೇತ್ರದ ಸಾಧಕರಾದ ಡಾ| ರತಿದೇವಿ, ವನಜಾ, ವೈಲೆಟ್‌ ಪಿರೇರಾ, ಖೈರುನ್ನೀಸ, ಸಿ.ಎಸ್‌. ರಾಧಿಕಾ, ಸುಧಾರತ್ನಾ, ಕಸ್ತೂರಿ ಅವರನ್ನು ಸಮ್ಮಾನಿಸಲಾಯಿತು.

ಬಂಟರ ಯಾನೆ ನಾಡವರ ಮಾತೃಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ ಸ್ವಾಗತಿಸಿದರು. ಕವಿತಾ ಶೆಟ್ಟಿ, ಮಂಜುಳಾ ಶೆಟ್ಟಿ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next