Advertisement

ಗ್ರಾಹಕರಿಗೆ ಅಪ್ರತಿಮ ಸೇವೆಯೇ ನಮ್ಮ ಗುರಿ: ಆನಂದ ಬಿ. ಮೂಲ್ಯ

11:20 AM Oct 02, 2022 | Team Udayavani |

ಡೊಂಬಿವಲಿ: ಕಳೆದ 23 ವರ್ಷಗಳಿಂದ ಡೊಂಬಿವಲಿ ಪರಿಸರದ ತುಳು-ಕನ್ನಡಿಗರ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ತುಳುಶ್ರೀ ಕೋ – ಆಪರೇ ಟಿವ್‌ ಸೊಸೈಟಿ ತನ್ನ ಗ್ರಾಹಕರಿಗೆ ಅಪ್ರತಿಮ ಸೇವೆ ಸಲ್ಲಿಸುವ ಮುಖಾಂತರ ಜನಮಾನಸ ದಲ್ಲಿ ಉತ್ತಮ ಸ್ಥಾನ ನಿರ್ಮಿಸಿ ಕೊಂಡಿದೆ. ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುವ ಗುರಿ ನಮ್ಮ ಸಂಸ್ಥೆಯದ್ದಾಗಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ ಹೇಳಿದರು.

Advertisement

ಡೊಂಬಿವಲಿ ಪೂರ್ವದ ಕೆ. ಡಿ. ಅಗರ್ವಾಲ್‌ ಸಭಾಗೃಹದಲ್ಲಿ ಸೆ. 25ರಂದು ಸಂಜೆ ನಡೆದ ತುಳುಶ್ರೀ ಕೋ – ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಡೊಂಬಿವಲಿ 23ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕ ಸದಸ್ಯರು ಹಾಗೂ ಆಡಳಿತ ಮಂಡಳಿಯ ಉತ್ತಮ ಕಾರ್ಯ ವೈಖರಿ ಹಾಗೂ ಸಿಬಂದಿಯ ಸೇವಾ ತತ್ಪರತೆಯಿಂದ ಸಂಸ್ಥೆ ಉತ್ತಮ ಸಾಧನೆಗೈಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ನಮ್ಮೆಲ್ಲರ ಹೆಮ್ಮೆಯ ಈ ಸಂಸ್ಥೆ ರಜತ ಮಹೋತ್ಸವ ಆಚರಿಸಲಿದ್ದು, ಈ ನಿಟ್ಟಿನಲ್ಲಿ ಶೇರು ಬಂಡವಾಳದ ಠೇವಣಿ ಹೆಚ್ಚಿಸುವ ಹಾಗೂ ಸಾಲವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ಸೊಸೈಟಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್‌ ಸುವರ್ಣ 22ನೇ ವಾರ್ಷಿಕ ಮಹಾಸಭೆಯ ವಾರ್ಷಿಕ ವರದಿ ಮಂಡಿಸಿ, ಟಿ. ಕೆ. ಪುತ್ರನ್‌ ಅವರ ಸೂಚನೆ ಮತ್ತು ಸಂತೋಷ್‌ ಶೆಟ್ಟಿ ಅವರ ಅನುಮೋದನೆಯೊಂದಿಗೆ ಮಂಜೂರು ಮಾಡಿದರು. 2021 – 22ರ ವಾರ್ಷಿಕ ವರದಿಯನ್ನು ನಾಗೇಶ ಹೊಸ್ಬೇಟಕರ ಅವರ ಸೂಚನೆ, ಲಕ್ಷ್ಮಣ್‌ ಸಿ. ಮೂಲ್ಯ ಅವರ ಅನುಮೋದನೆಯೊಂದಿಗೆ ಮಂಜೂರು ಮಾಡಲಾಯಿತು. 2021-22ನೇ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಕೋಶಾಧಿಕಾರಿ ನಾರಾಯಣ ಬಿ. ಪೂಜಾರಿ ಮಂಡಿಸಿದರು. ಜಿ. ಎಸ್‌. ನಾಯಕ್‌ ಅವರ ಸೂಚನೆ, ವಸಂತ ಸುವರ್ಣ ಅವರ ಅನುಮೋದನೆಯೊಂದಿಗೆ ಲೆಕ್ಕಪತ್ರವನ್ನು ಮಂಜೂರು ಮಾಡಲಾಯಿತು. 2021-22ನೇ ವರ್ಷದ ಲಾಭಾಂಶದ ವಿಷಯವನ್ನು ಮಂಡಿಸಲಾಯಿತು.

ವಿನೋದಾ ಶೆಟ್ಟಿ ಅವರ ಸೂಚನೆ ಹಾಗೂ ಚಂದ್ರಾ ನಾಯ್ಕ ಅವರ ಅನುಮೋದನೆಯಂತೆ ಶೇ. 6ರಷ್ಟು ಲಾಭಾಂಶವನ್ನು ಶೇರುದಾರರಿಗೆ ಘೋಷಿಸಲಾ ಯಿತು. 2022-23ನೇ ಸಾಲಿನ ಆಂತರಿಕ ಲೆಕ್ಕಪರಿಶೋಧಕರಾಗಿ ಯು. ಪಿ. ಪೈ ಆ್ಯಂಡ್‌ ಕಂಪೆನಿ ಹಾಗೂ ಲೆಕ್ಕಪರಿಶೋಧಕಕರಾಗಿ ಆರ್‌. ಕೆ. ಪಾಟೀಲ್‌ ಅವರನ್ನು ನಾಗೇಶ ಹೊಸ್ಬೇಟಕರ ಅನುಮೋದನೆಯಂತೆ ನೇಮಿಸಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ಕಾರ್ಯದರ್ಶಿ ಲಕ್ಷ್ಮಣ್‌ ಸುವರ್ಣ, ಕೋಶಾಧಿಕಾರಿ ನಾರಾಯಣ ಬಿ. ಪೂಜಾರಿ, ಸದಸ್ಯ ಎಂ. ಪಿ. ಪೈ, ದೇವದಾಸ್‌ ಕುಲಾಲ್‌ ಹಾಗೂ ಲೆಕ್ಕಪರಿಶೋಧಕ ಯು. ಪಿ. ಪೈ ಉಪಸ್ಥಿತರಿದ್ದರು. ಸಭೆಯಲ್ಲಿ ಅನೇಕ ಗಣ್ಯರು ಮಾತನಾಡಿ ಸಲಹೆ-ಸೂಚನೆಗ ಳನ್ನು ನೀಡಿದರು.

ದೇವದಾಸ್‌ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ್‌ ಸುವರ್ಣ ವಂದಿಸಿದರು. ಶೇರುದಾರರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

-ಚಿತ್ರ-ವರದಿ: ಗುರುರಾಜ್‌ ಪೋತನೀಸ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next