Advertisement

ತುಳುನಾಡೋಚ್ಚಯ- 2017 ಉದ್ಘಾಟನೆ 

09:41 AM Dec 24, 2017 | |

ಮಹಾನಗರ: ತುಳು ಸಂಸ್ಕೃತಿ ಆಚಾರ, ವಿಚಾರಗಳನ್ನು ಬಿಂಬಿಸುವ ನೃತ್ಯ, ವಿವಿಧ ಸಮುದಾಯಗಳ ಸಂಸ್ಕೃತಿ, ಉಡುಗೆ ತೊಡುಗೆಗಳ ಪ್ರದರ್ಶನ, ಜನಪದ ಕುಣಿತ, ತುಳುನಾಡಿನ ವಾದ್ಯೋಪಕರಣಗಳ ವಾದನ, ಗೊಂಬೆಯಾಟ, ಸ್ತಬ್ಧಚಿತ್ರ, ಸಿಂಗಾರ ಮೇಳ ಇವೆಲ್ಲಾ ಕಂಡಿದ್ದು ‘ತುಳುನಾಡೋಚ್ಚಯ 2017’ರ ಸಾಂಸ್ಕೃತಿಕ ಮೆರವಣಿಗೆಯಲ್ಲಿ.

Advertisement

ವಿಶ್ವ ತುಳುವೆರೆ ಆಯನೊ ಕೂಟ, ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಎರಡು ದಿನ ಕಾಲ ನಡೆಯುವ ‘ತುಳುನಾಡೋಚ್ಚಯ 2017′-ತುಳುನಾಡ್‌ದ ಜಾತಿ, ಮತೊ, ಬಾಸೆ ಒತ್ತೂರ್ಮೆ’ ಸಮ್ಮೇಳನ ಪಿಲಿಕುಳ ಸಂಸ್ಕೃತಿ ಗ್ರಾಮದಲ್ಲಿ ಶನಿವಾರ ಉದ್ಘಾಟನೆಗೊಂಡಿತು. ವಾಮಂಜೂರಿನಿಂದ ಪಿಲಿಕುಳದವರೆಗೆ ಸಮ್ಮೇಳನದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ತುಳುನಾಡಿನ ಗಂಡು ಕಲೆ ಯಕ್ಷಗಾನ, ಕೇರಳದ ಕಳರಿಫೈಟ್‌, ಲಂಬಣಿ ನೃತ್ಯ ಸೇರಿದಂತೆ ಮೆರವಣಿಗೆಯಲ್ಲಿ 28ಕ್ಕೂ ಹೆಚ್ಚು ಕಲಾಪ್ರಕಾರಗಳು ಕೈ ಜೋಡಿಸಿದವು. ಮೆರವಣಿಗೆಯೊಂದಿಗೆ ನೂರಾರು ಜನ ಸಂಭ್ರಮದಿಂದ ಹೆಜ್ಜೆ ಹಾಕಿದರು.

ಸಭಾ ಕಾರ್ಯಕ್ರಮ
ಸಾಂಸ್ಕೃತಿಕ ಮೆರವಣಿಗೆ, ವಿವಿಧ ಪ್ರದರ್ಶನಗಳ ಉದ್ಘಾಟನೆ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ.ಪ್ರಸನ್ನ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ್‌ ಕೋಟ್ಯಾನ್‌, ತುಳುನಾಡೋಚ್ಚಯ 2017ರ ಅಧ್ಯಕ್ಷ ಡೇವಿಡ್‌ ಫ್ರಾಂಕ್‌ ಫೆರ್ನಾಂಡಿಸ್‌ , ತುಳುನಾಡೋಚ್ಚಯ 2017 ಯು.ಎ.ಇ. ಕಾರ್ಯಾದ್ಯಕ್ಷ ಎಂ.ಇ. ಮುಳೂರು, ಮುದ್ರಾಡಿ ಸ್ವಾಮಿ, ವಾಮಂಜೂರು ಚರ್ಚ್ ನ ಧರ್ಮಗುರು ಫಾ| ಸಿಪ್ರಿಯರ್‌ ಪಿಂಟೋ, ಮಂಜುನಾಥ್‌ ಭಂಡಾರಿ, ಡಾ| ಚೆನ್ನಪ್ಪ ಗೌಡ, ಮೂಡುಶೆಡ್ಡೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಹರಿ ಪ್ರಸಾದ್‌ ಶೆಟ್ಟಿ, ಹೇಮಲತಾ, ತುಳುನಾಡೋಚ್ಚಯದ ಪ್ರಧಾನ ಕಾರ್ಯದರ್ಶಿಗಳಾದ ಶಮೀನಾ ಆಳ್ವ, ಡಾ| ರಾಜೇಶ್‌ ಆಳ್ವ, ಪ್ರ.ಸಂಚಾಲಕ ಯೋಗೀಶ್‌ ಶೆಟ್ಟಿ ಜೆಪ್ಪು, ಪದಾಧಿಕಾರಿಗಳಾದ ರಾಜೀವ್‌ ಅಂಚನ್‌ ಅಪ್ಪಣಬೆಟ್ಟು, ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಪ್ರದರ್ಶನಗಳ ಉದ್ಘಾಟನೆ 
ಸಮ್ಮೇಳನ ನಗರಿಯಲ್ಲಿ ತುಳುನಾಡಿನ ಎಲ್ಲಾ ರೀತಿಯ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ವಸ್ತು ಪ್ರದರ್ಶನ, ತುಳುನಾಡಿನ ಖಾದ್ಯ ಸಂಸ್ಕೃತಿ ಬಿಂಬಿಸುವ ಆಹಾರೋತ್ಸವ, ಕೃಷಿ ವಸ್ತು ಪ್ರದರ್ಶನ, ಕುಲಕಸುಬು, ಪುಸ್ತಕ, ಸಂಸ್ಕೃತಿ, ವ್ಯಾಪಾರ ಮಳಿಗೆ, ಚಿತ್ರ ಹಾಗೂ ಛಾಯಾಚಿತ್ರ, ನಾಡಮದ್ದು, ಯಂತ್ರೋಪಕರಣ, ಪುಷ್ಪೋದ್ಯಾನಗಳ ಪ್ರದರ್ಶನಗಳನ್ನು ಆಗಮಿಸಿದ್ದ ಗಣ್ಯರು ಉದ್ಘಾಟಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next