Advertisement
ಮುಖ್ಯ ಅತಿಥಿಗಳನ್ನು ಶೋಭಿತಾ ಪ್ರೇಮ್ ಜೀತ್ ಅವರು ಬೆಲ್ಲ ನೀರು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ದುಬಾೖಯ ಖ್ಯಾತ ಉದ್ಯಮಿ, ಹಿರಿಯ ಸದಸ್ಯರಾದ ಪ್ರಭಾಕರ ಶೆಟ್ಟಿ ಅವರು ತುಳುನಾಡಿನ ಅಪ್ಪೆ ಭಾಷೆ ತುಳು ಲಿಪಿಯಿಂದ ತುಳು ಪಾರ್ತೆಗ ತುಳು ಒರಿಪಾಗ-ಗೌಜಿ ಗಮ್ಮತ್ತ್- 2019 ಎಂದು ಬರೆಯುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ತುಳುನಾಡಿನ ಕ್ರೀಡೆಗಳಿಗೆ ಚಾಲನೆ ನೀಡಿ, ಮಾತನಾಡಿ, ಅಪ್ಪೆ ಭಾಷೆ ತುಳು ಲಿಪಿಯನ್ನು ಕಲಿತು ಬೆಳೆಸಿ ಉಳಿಸಬೇಕು ಎಂದು ತಿಳಿಸಿದರು.
Related Articles
Advertisement
ದುಬಾೖಯ ಧಾರ್ಮಿಕ ಮುಂದಾಳು, ಸಮಾಜ ಸೇವಕರಾದ ಆನಂದ್ ಸಾಲ್ಯಾನ್, ಉಷಾ ಆನಂದ್ ಸಾಲ್ಯಾನ್ ದಂಪತಿ ಮತ್ತು ದುಬಾೖಯ ಸಮಾಜ ಸೇವಕರಾದ ನೋವೆಲ್ ಅಲ್ಮೇಡಾವರನ್ನು ಅಪ್ಪೆ ಭಾಷೆ ತುಳುವ ತುಡರ್ ಎಂಬ ಬಿರುದನ್ನು ನೀಡಿ ಸಮ್ಮಾನಿಸಲಾಯಿತು. ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಜೆ ಚಾಹದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಿದ ಎÇÉಾ ಮಹನೀಯರಿಗೆ ನೆನಪಿನ ಕಾಣಿಕೆ, ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಅಭಿನಂದಿಸಲಾಯಿತು.
ತಂಡದ ಸಕ್ರಿಯ ಕಾರ್ಯಕರ್ತರಾದ ಸತೀಶ್ ಉಳ್ಳಾಲ್, ಸತೀಶ್ ಪೂಜಾರಿ, ಕವಿರಾಜ್ ಕುಂದರ್, ಮನೋಜ್ ಕುಲಾಲ್, ಶೋಬಿತಾ ಪ್ರೇಮಜೀತ್, ಆಶ್ವಿನಿ ಸತೀಶ್, ದೀಪಕ್ ಸನಿಲ್, ಪ್ರೇಮಶ್ರೀ ಸುವರ್ಣ ಮಾರ್ನಾಡ್, ಭಾಸ್ಕರ್ ಅಂಚನ್, ಪುರಂದರ ಕುಲಾಲ್, ಪವನ್ ಪೂಜಾರಿ, ನವೀನ್ ಸರಪಾಡಿ, ರವೀಂದ್ರ ಪೂಜಾರಿ, ಸೂರಜ್, ಪ್ರತಿಕ್ ಉಳ್ಳಾಲ್, ಗುರುದತ್ತ್ ಬೆಲ್ಚಡ ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಹಕರಿಸಿದರು.
ತಂಡದ ಪ್ರಧಾನ ಕಾರ್ಯದರ್ಶಿ ರೀತು ಅಂಚನ್ ಕುಲಶೇಖರ ತಂಡದ ಸಾಧನೆಯನ್ನು ವಿವರಿಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.