Advertisement
ಸೃಷ್ಟಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿಯಲ್ಲಿ ನಮ್ಮ ಪೂರ್ವಜರು ಕಂಡಿದ್ದಾರೆ. ಪ್ರತಿ ಸೃಷ್ಟಿಯ ಹಿಂದೆ ಹೆಣ್ಣು ಇರುತ್ತಾಳೆ. ಹಾಗಾಗಿ ಪ್ರಾಕೃತಿಕ ಸಂಪತ್ತು, ಬೆಳೆ, ಕೃಷಿಯ ಸೃಷ್ಟಿಯ ಹಿಂದೆಯೂ ಭೂಮಿ ತಾಯಿಯೆಂಬ ಹೆಣ್ಣು ಇದ್ದಾಳೆಂಬ ನಂಬಿಕೆ ತಲೆತಲಾಂತರದ್ದು. ಭೂಮಿ ಯನ್ನು ಹೆಣ್ಣೆಂಬ ಭಾವನೆಯಿಂದ ನೋಡುವು ದರಿಂದಲೇ ತುಳುನಾಡಿನಲ್ಲಿ ಕೆಡ್ಡಸ ಆಚ ರಣೆ ಮಹತ್ವ ಪಡೆದಿದ್ದು, ಇಂದಿಗೂ ನಡೆಸಿ ಕೊಂಡು ಬರಲಾಗುತ್ತಿದೆ.
Related Articles
ಫೆ. 9ರಿಂದ ತುಳುನಾಡಿನಾದ್ಯಂತ ಕೆಡ್ಡಸ ಆಚರಣೆ ಶುರುವಾಗಿದೆ. ಎರಡನೇ ದಿನ ವಾದ 10ರಂದು ನಡು ಕೆಡ್ಡಸವಾಗಿದ್ದು, ಅಂದು ತುಳುನಾಡಿನ ಹೆಚ್ಚಿನ ಮನೆಗಳಲ್ಲಿ ಅಕ್ಕಿ, ಹುರುಳಿ ಬೇಯಿಸಿ ತಿನ್ನುವ ಕ್ರಮವಿದೆ. ಗ್ರಾಮೀಣ ಭಾಗಗಳಲ್ಲಿ ಕುಚ್ಚಿಲಕ್ಕಿ ಹುಡಿ ಮಾಡಿ, ಅದಕ್ಕೆ ಬೆಲ್ಲ, ತೆಂಗಿನ ಕಾಯಿ ಹಾಕಿ ತಿನ್ನುವ ಕ್ರಮವಿದೆ. ಅಲ್ಲದೆ, ಕೆಲವು ಮನೆಗಳಲ್ಲಿ ಮಾಂಸಾಹಾರದ ಊಟ ಸೇವಿಸುವುದು ವಾಡಿಕೆ.
Advertisement
ಭೂಮಿಗೆ ಹಾನಿ ಮಾಡುವಂತಿಲ್ಲಕೆಡ್ಡಸದ ಮೂರು ದಿನಗಳಂದು ಭೂಮಿಗೆ ಯಾವುದೇ ರೀತಿಯ ಪೆಟ್ಟು ಮಾಡುವಂತಿಲ್ಲ. ಕೊಡಲಿ ಏಟು, ಕೊಟ್ಟು, ಪಿಕ್ಕಾಸಿನಲ್ಲಿ ಅಗೆಯುವಂತಿಲ್ಲ. ಮನೆ ಆವರಣವನ್ನು ಸ್ವತ್ಛಗೊಳಿಸಿ 7 ಬಗೆಯ ಧಾನ್ಯಗಳನ್ನು ಬೆರೆಸಿ ಭೂತಾಯಿಗೆಂದು ಬಾಳೆಲೆಯಲ್ಲಿ ಇಡುವುದು ಕ್ರಮ. ಹೆಣ್ಣು ರಜಸ್ವಲೆಯಾದಾಗ ಅವಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡಬೇಕೆಂಬ ಸಂಕೇತದೊಂದಿಗೆ ಈ ಕ್ರಮವನ್ನು ಅನುಸರಿಸಲಾಗುತ್ತದೆ. ಭೂದೇವಿಗೆ ವಸ್ತ್ರ, ಗೆಜ್ಜೆ, ಕತ್ತಿ, ಕಲಶ, ಅರಸಿನ, ಕುಂಕುಮ ಮುಂತಾದವುಗಳನ್ನು ಇಡುವುದೂ ವಾಡಿಕೆಯಾಗಿ ಬೆಳೆದು ಬಂದಿದೆ.