Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

ತುಳು ಅಧಿಕೃತ ಭಾಷೆಗೆ ಸರಕಾರ ಗಂಭೀರ ಪ್ರಯತ್ನ: ಸಿಎಂ, ತುಳುವರ ಬಹುಕಾಲದ ಕನಸಿಗೆ ಈಗ ಮತ್ತೆ ಮರುಜೀವ

Team Udayavani, Jan 16, 2025, 9:40 AM IST

3-Tulu-language

ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಜಾರಿಯಲ್ಲಿರುವುದಕ್ಕೆ ಪೂರಕವಾಗಿ ಇದನ್ನು ಕರ್ನಾಟಕದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಹುಕಾಲದ ಕನಸಿಗೆ ಮರುಜೀವ ದೊರಕಿದೆ. ಈ ಭಾಷೆಯ ಇತಿಹಾಸ ಏನು? ಸ್ಥಾನಮಾನ ದೊರೆತರೆ ಶಿಕ್ಷಣ, ಆಡಳಿತದಲ್ಲಾಗುವ ಪರಿಣಾಮ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮಂಗಳೂರು ಸಮೀಪ ಈಚೆಗೆ ನಡೆದ “ಕಂಬಳ್ಳೋತ್ಸವ’ದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಸ್ತಾವ‌ವನ್ನು ಸರಕಾರ ಗಂಭೀರ ವಾಗಿ ಪರಿಗಣಿಸಲಿದೆ’ ಎಂದು ಹೇಳುವ ಮೂಲಕ ಈ ವಿಷಯದ ಕುರಿತಾಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಯಾವುದೇ ಭಾಷೆ ಉಳಿಯುವುದು ಬರಹದ ಮೂಲಕ ಅಲ್ಲ. ಅದು ಮಾತನಾಡುವ ಮೂಲಕ. ಆ ನಿಟ್ಟಿನಲ್ಲಿ ತುಳು ಇದೇ ನೆಲೆಯಲ್ಲಿ ಇನ್ನೂ ಉಳಿದುಕೊಂಡಿದೆ, ಬೆಳೆದುಕೊಂಡಿದೆ. ಕರಾವಳಿಯಲ್ಲಿ ಕನ್ನಡ ಪ್ರಧಾನ ಭಾಷೆಯಾಗಿದ್ದರೂ ತುಳು ಸಂಪರ್ಕ ಭಾಷೆಯಾಗಿ ಸಾರ್ವತ್ರಿಕವಾಗಿದೆ. ಈ ಭಾಗಗಳಲ್ಲಿ ಎಲ್ಲರ ವ್ಯಾವಹಾರಿಕ ಭಾಷೆಯಾಗಿ ತುಳು ಬೆಸೆದುಕೊಂಡಿದೆ.

2ನೇ ರಾಜ್ಯ ಭಾಷೆ ಸ್ಥಾನ ಏಕೆ?
ಜನಸಾಮಾನ್ಯರ ಭಾಷೆಯಲ್ಲಿ ಜನತೆಗೆ ಆಡಳಿತ ಹಾಗೂ ಶಿಕ್ಷಣ ಸಿಗಬೇಕು ಎಂಬುದು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ಹಾಗಾಗಿ ಜನಸಾಮಾನ್ಯರಿಗೆ ಅವರ ಭಾಷೆಯಲ್ಲಿ ಹೆಚ್ಚು ಅವಕಾಶ ಕಲ್ಪಿಸುವುದೇ 2ನೇ ರಾಜ್ಯ ಭಾಷಾ ಸ್ಥಾನಮಾನದ ಮುಖ್ಯ ಉದ್ದೇಶ. ಕರ್ನಾಟಕದ ಅಲ್ಪಸಂಖ್ಯಾಕ ಭಾಷೆ ಹಾಗೂ ಪ್ರಧಾನವಾಗಿ ಕರಾವಳಿಯಲ್ಲಿ ಪ್ರಮುಖ ಭಾಷೆಯಾಗಿರುವ ತುಳುವಿಗೆ ಸಂವಿಧಾನದ ಪ್ರಕಾರ 2ನೇ ರಾಜ್ಯ ಭಾಷಾ ಸ್ಥಾನಮಾನ ಸಿಗಬೇಕು ಎಂಬುದು ತುಳುವರ ಆಶಯ. ಹಾಗೆಂದು ಇದು ಕನ್ನಡದ ಬದಲು ತುಳು ಭಾಷೆ ಅಲ್ಲ. ಕನ್ನಡವೇ ಪ್ರಧಾನ ಭಾಷೆ ಆಗಿರುತ್ತದೆ. ಅದರ ಜತೆಗೆ 2ನೇ ಭಾಷೆ­ಯಾಗಿ ತುಳು ಇರಲಿದೆ. ಕನ್ನಡಕ್ಕೆ ಸಮಸ್ಯೆ ಆಗದಂತೆ ತುಳು 2ನೇ ಭಾಷೆಯಾಗಿ ಬಳಕೆ­ಯಾಗುತ್ತದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾ­ಗ­ಲೇ ಎರಡು, ಮೂರು ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆ­ಗಳಾಗಿ ಬಳಸಲಾ­ಗುತ್ತಿದೆ.

ವರದಿ ಸಲ್ಲಿಸಿದ ಅಧ್ಯಯನ ಸಮಿತಿ
ತುಳು ಭಾಷೆಯನ್ನು ಕರ್ನಾಟಕ ರಾಜ್ಯದಲ್ಲಿ 2ನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ವರದಿ ಸಲ್ಲಿಸಲು ಡಾ| ಎಂ.ಮೋಹನ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ಈ ಹಿಂದಿನ ಸರಕಾರ ಸಮಿತಿ ರಚಿಸಿತ್ತು. ತುಳು ಭಾಷೆಯ ಸ್ವರೂಪ ಹಾಗೂ ಇತಿಹಾಸ, ತುಳು ಸಾಹಿತ್ಯ ಪರಂಪರೆ, ತುಳು ಲಿಪಿ, ಪ್ರಾಚೀನ ತುಳು ಸಾಹಿತ್ಯ, ಆಧುನಿಕ ತುಳು ಸಾಹಿತ್ಯ, ಸಂಸ್ಕೃತಿ, ತುಳು ಶಾಸನಗಳ ಕುರಿತು ಈ ಸಮಿತಿ ಅಧ್ಯಯನ ನಡೆಸಿ ತನ್ನ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯ ಕುರಿತು ಕಾನೂನು ಇಲಾಖೆಯು ಕೆಲವು ಅಭಿಪ್ರಾಯ ನೀಡಿದೆ. “ನಮ್ಮ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಆಡಳಿತ ಭಾಷೆಯಾಗಿ­ರುತ್ತದೆ.

ಅದೇ ರೀತಿ ಇಂಗ್ಲಿಷ್‌ ಹೆಚ್ಚುವರಿ ಆಡಳಿತ ಭಾಷೆ­ಯಾಗಿ ರುತ್ತದೆ. ಯಾವುದೇ ರಾಜ್ಯ ಸರಕಾರ ಒಂದು ಭಾಷೆಯನ್ನು ಆ ರಾಜ್ಯದ ಅಧಿಕೃತ ಭಾಷೆಯೆಂದು ಘೋಷಿಸಲು ಭಾರತ ಸಂವಿಧಾನದ ಅನುಚ್ಛೇದ 345ರಲ್ಲಿ ಅವಕಾಶ ಮಾಡಿಕೊಟ್ಟಿದೆ. ಈ ಪ್ರಕಾರ ಕ್ರಮವಹಿಸುವ ಪೂರ್ವದಲ್ಲಿ ಆ ರಾಜ್ಯಗಳು ಕಾನೂನಾತ್ಮಕವಾಗಿ ಸಮಿತಿಗಳನ್ನು ರಚಿಸಿ, ವರದಿ ಪಡೆದು ಅನಂತರ ಮುಂದುವರಿಯ ಬೇಕಾ ಗುತ್ತದೆ. ಅದೇ ರೀತಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯೆಂದು ಘೋಷಿಸಲು ಕ್ರಮ ವಹಿಸಬಹುದು. ಇದಕ್ಕೂ ಮುನ್ನ ಸೂಕ್ತವಾದ ಅಧ್ಯಯನ ಮಾಡಲು ಸಮಿತಿ ರಚಿಸಿ ಆ ವರದಿ ಆಧಾರದ ಮೇಲೆ ಹಾಗೂ ವಿವಿಧ ರಾಜ್ಯ­ಗಳಲ್ಲಿ 2ನೇ ಭಾಷೆಯನ್ನು ಘೋಷಿಸಿರುವ ಬಗ್ಗೆ ಅಧ್ಯಯನ ನಡೆಸಿ ಆನಂತರ ಮುಂದುವರಿಯಬಹುದು ಎಂದು ಕಾನೂನು ಇಲಾಖೆ ಸರಕಾರಕ್ಕೆ ಅಭಿಪ್ರಾಯ ನೀಡಿತ್ತು.

ಸ್ಥಾನಮಾನಕ್ಕಾಗಿ ನಿರಂತರ ಹೋರಾಟ
ತುಳು ಭಾಷೆಗೆ ರಾಜ್ಯ ಭಾಷೆ ಸ್ಥಾನಮಾನ ದೊರಕಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯ ಸಾಹಿತಿಗಳು, ಜನಪ್ರತಿನಿಧಿಗಳು, ಕಲಾವಿದರು ಸಹಿತ ಗಣ್ಯರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಲವು ಸುತ್ತಿನ ಮನವಿ ನೀಡಿದ್ದಾರೆ. ತುಳುನಾಡಿನ ಸಮಾನಮನಸ್ಕರು ಸಾಮಾಜಿಕ ಜಾಲತಾಣದಲ್ಲಿ, ಅಂಚೆಕಾರ್ಡ್‌ ಮೂಲಕ ದೇಶವ್ಯಾಪಿ ಅಭಿಯಾನ ನಡೆಸಿದ್ದಾರೆ. ವಿವಿಧ ಸ್ವರೂಪದ ಹೋರಾಟಗಳು ನಡೆದಿವೆ. ಉಭಯ ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಪಕ್ಷಾತೀತ ವಾಗಿ ಈ ನಿಟ್ಟಿನಲ್ಲಿ ಧ್ವನಿ ಎತ್ತಿದ್ದಾರೆ. ಈ ಎಲ್ಲ ಹೋರಾಟಗಳಿಗೆ ಫ‌ಲ ದೊರೆಯುವ ಕಾಲ ಸನ್ನಿಹಿತವಾಗಿದೆ.

ತುಳುವಿನಲ್ಲೇ ಸರಕಾರಿ ಆದೇಶಗಳು?
“ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ. ತುಳು 2ನೇ ಅಧಿಕೃತ ಭಾಷೆಯಾದರೆ ಯಾವುದೇ ಸರಕಾರಿ ಆದೇಶಗಳು ಕನ್ನಡ ಹಾಗೂ ತುಳುವಿನಲ್ಲಿಯೂ ಇರಲಿದೆ. ರಾಜ್ಯಕ್ಕೆ ಇದನ್ನು ಬಳಸ ಬಹುದು ಅಥವಾ ಒಂದು ಪ್ರದೇಶಕ್ಕೆ ಇದನ್ನು ಬಳಸಲು ಅವಕಾಶ ಇರುತ್ತದೆ. ಕನ್ನಡದ ಹಾಗೆಯೇ 1ನೇ ತರಗತಿಯಿಂದ ತುಳು ಭಾಷೆಯನ್ನು ಕೂಡ “ಐಚ್ಛಿಕ’ವಾಗಿ ಓದಲು ಅವಕಾಶ ಸಿಗಲಿದೆ.

ಸ್ಥಳೀಯ ಆಡಳಿತದಲ್ಲಿ ಆದೇಶಗಳು ಹಾಗೂ ಸಭೆಗ­ಳನ್ನು ಕನ್ನಡದಲ್ಲಿ ಮಾಡುವಂತೆಯೇ ತುಳುವಿನಲ್ಲಿ ಮಾಡುವ ಆಯ್ಕೆಯ ಅವಕಾಶ ಲಭಿಸಲಿದೆ. ತುಳು ಪ್ರಧಾನ ವಾಗಿರುವ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಇದನ್ನು ಕಡ್ಡಾಯ ನೆಲೆಯ­ಲ್ಲಿಯೂ ಮಾಡಬಹುದು. ರಾಜ್ಯ ವಿಧಾನ ಮಂಡಲದಲ್ಲಿ ಶಾಸಕರು ತುಳುವಿನಲ್ಲಿ ಲಿಖೀತ ಪ್ರಶ್ನೆಗಳನ್ನು ಕೇಳಿದರೆ ಸಚಿವರು ಅನುವಾದಕರ ಸಹಾಯ­ದಿಂದ ತುಳುವಿನಲ್ಲೇ ಲಿಖೀತ ಉತ್ತರ ನೀಡಬಹುದು. ಹೊರ ಭಾಗ ದಿಂದ ಕರಾವಳಿಗೆ ಬಂದ ಇಲಾಖಾ ಅಧಿಕಾರಿಯಲ್ಲಿ ತುಳುವಿನಲ್ಲಿಯೂ ಮಾತನಾಡಿ ಉತ್ತರ ಪಡೆದು ಕೊಳ್ಳಬಹುದು. ಇನ್ನು ಇಲ್ಲಿನ ಅಧಿಕಾರಿಗೆ ತುಳು ಬಾರದೇ ಇದ್ದರೆ ಕಲಿಯಬೇಕು ಅಥವಾ ಇತರರ ಸಹಾಯದಿಂದ ಉತ್ತರ ನೀಡುವಂತೆ ಮಾಡಲು ಇದರಿಂದ ಸಾಧ್ಯವಾಗಲಿದೆ’ ಎನ್ನುತ್ತಾರೆ ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ.

ತುಳು ಭಾಷೆಗೆ 2,000ಕ್ಕೂ ಅಧಿಕ ವರ್ಷದ ಇತಿಹಾಸ
ಮೂಲ ದ್ರಾವಿಡ ಭಾಷೆಯಿಂದ ಸುಮಾರು 2,000ಕ್ಕೂ ಅಧಿಕ ವರ್ಷದ ಹಿಂದೆ ಪ್ರತ್ಯೇಕಗೊಂಡ ಮೊದಲ ಭಾಷೆ ತುಳು. ಪ್ರಾಚೀನ ತುಳುನಾಡಿಗೆ ಮೊದಲು ಸಮುದ್ರ ಸಂಪರ್ಕವಷ್ಟೇ ಇತ್ತು. ಆಗ ಇಲ್ಲಿ ಬಳಕೆಯಲ್ಲಿದ್ದುದು ತುಳು ಭಾಷೆ ಮಾತ್ರ. ಬಹುತೇಕ ಕನ್ನಡ ರಾಜವಂಶಗಳೇ ಆಳುತ್ತಿದ್ದ ಕಾರಣದಿಂದ ಕಾಲಕ್ರಮೇಣ ತುಳುನಾಡಿಗೆ ಕನ್ನಡ ಭಾಷೆ ಪರಿಚಯವಾಯಿತು ಹಾಗೂ ಆ ಕಾಲದಲ್ಲಿಯೇ ಸಂಪದ್ಭರಿತವಾಗಿದ್ದ ರಾಜ್ಯದ ಕರಾವಳಿ ಪ್ರದೇಶಕ್ಕೆ ಉಳಿದೆಡೆಯಿಂದ ಹಲವರು ಉದ್ಯೋಗ, ವ್ಯಾಪಾರ-ವ್ಯವಹಾರ ಸಹಿತ ವಿವಿಧ ಕಾರಣಗಳಿಂದ ವಲಸೆ ಬಂದ ಪರಿಣಾಮ ಅವರವರ ಭಾಷೆಗಳೂ ಬಳಕೆಗೆ ಬಂದವು.

ಸದ್ಯ ಕರಾವಳಿ ಕರ್ನಾಟಕದಲ್ಲಿ ತುಳುವನ್ನೇ ಮಾತೃಭಾಷೆಯನ್ನಾಗಿ ಹೊಂದಿರುವ 40ಕ್ಕೂ ಅಧಿಕ ಸಮುದಾಯಗಳಿವೆ. ವಿಶೇಷವೆಂದರೆ ಇಲ್ಲಿರುವ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಜೈನರು ತುಳುವನ್ನೇ ವ್ಯವಹಾರ ಭಾಷೆಯನ್ನಾಗಿ ಈ ಭಾಗಗಳಲ್ಲಿ ಬಳಕೆ ಮಾಡುತ್ತಾರೆ. ತುಳುವೇ ಅವರೆಲ್ಲರಿಗೂ ಸಂಪರ್ಕ ಭಾಷೆಯಾಗಿದೆ. ಇದಲ್ಲದೆ, ತುಳು-ಕನ್ನಡ-ಇಂಗ್ಲಿಷ್‌ ಡಿಕ್ಷನರಿ, ತುಳು ವ್ಯಾಕರಣ, ತುಳು ಪಠ್ಯಪುಸ್ತಕ, ತುಳು ಜಾನಪದ ಸಂಕಲನಗಳು, ತುಳು ಅನುವಾದಗಳು 150 ವರ್ಷದ ಹಿಂದೆಯೇ ಪ್ರಕಟವಾಗಿವೆ. ಇದರ ಜತೆಗೆ ತುಳು ಲಿಪಿ, ಪ್ರಾಚೀನ ತುಳು ಸಾಹಿತ್ಯಕ್ಕೆ 600ಕ್ಕೂ ಅಧಿಕ ವರ್ಷದ ಇತಿಹಾಸವಿದೆ ಎಂಬುದನ್ನು ವಿದ್ವಾಂಸರು ಈ ವೇಳೆ ನೆನಪು ಮಾಡುತ್ತಾರೆ.

ಬೇರೆ ರಾಜ್ಯಗಳಲೂ 2ನೇ ಅಧಿಕೃತ ಭಾಷೆಗಳಿವೆಯೇ?
ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಲ ರಾಜ್ಯಗಳು ಈಗಾಗಲೇ ಹೆಚ್ಚುವರಿ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಕೆಲವು ರಾಜ್ಯಗಳಲ್ಲಿ ಇಂಗ್ಲಿಷ್‌ ಭಾಷೆ 2ನೇ ರಾಜ್ಯ ಭಾಷೆಯಾಗಿದ್ದರೆ ಉಳಿದ ಕಡೆಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯೇ 2ನೇ ರಾಜ್ಯ ಭಾಷೆಯಾಗಿದೆ. ವಿವಿಧ ರಾಜ್ಯಗಳಲ್ಲಿ 2ನೇ ರಾಜ್ಯ ಭಾಷೆಯ ಆಯ್ಕೆಯನ್ನು ಯಾವ ಸ್ವರೂಪದಲ್ಲಿ ಮಾಡಿ ಅಧಿಕೃತ ಘೋಷಣೆ ಮಾಡಲಾಗಿದೆ ಎಂಬ ಬಗ್ಗೆ ದಾಖಲಾತಿ ಒದಗಿಸುವಂತೆ ಕೋರಿ ರಾಜ್ಯ ಸರಕಾರದಿಂದ ಈಗಾಗಲೇ ಅಲ್ಲಿನ ರಾಜ್ಯ ಸರಕಾರಗಳಿಗೆ ಪತ್ರ ಬರೆಯಲಾಗಿದೆ. ಈ ಕುರಿತು ಆಂಧ್ರಪ್ರದೇಶ ಸರಕಾರದಿಂದ ಮಾಹಿತಿ ಬಂದಿದೆ. ಬಿಹಾರ ಹಾಗೂ ಪಶ್ಚಿಮ ಬಂಗಾಲದಿಂದ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಬಿಹಾರ ಹಾಗೂ ಪಶ್ಚಿಮ ಬಂಗಾಲ ರಾಜ್ಯಗಳಿಂದ ಮಾಹಿತಿ ಲಭಿಸಿದ ಅನಂತರ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತು ಪರಿಶೀಲಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ರಾಜ್ಯದಲ್ಲಿ 1 ಕೋಟಿಗೂ ಅಧಿಕ ತುಳು ಭಾಷಿಗರು!
ದಕ್ಷಿಣ ಕನ್ನಡ, ಉಡುಪಿ ಹಾಗೂ ಗಡಿನಾಡು ಕಾಸರಗೋಡಿನಲ್ಲಿ ತುಳು ಭಾಷಿಕರೇ ಪ್ರಧಾನ­ ವಾಗಿದ್ದಾರೆ. ಬೆಂಗಳೂರು ಸಹಿತ ರಾಜ್ಯದ ವಿವಿಧ ನಗರಗಳಲ್ಲಿ ತುಳು ಭಾಷಿಗರು ಗಣನೀಯ ಪ್ರಮಾಣದಲ್ಲಿದ್ದಾರೆ. ಮಹಾರಾಷ್ಟ್ರ, ಗುಜರಾತ್‌, ಕೇರಳ ಸಹಿತ ದೇಶದ ವಿವಿಧ ರಾಜ್ಯಗಳಲ್ಲಿದ್ದಾರೆ. ದುಬಾೖ, ಕತಾರ್‌, ಕುವೈತ್‌ ಸಹಿತ ಹಲವಾರು ವಿದೇಶಗಳಲ್ಲಿಯೂ ತುಳುವರ ಸಂಖ್ಯೆ ಅಧಿಕವಿದೆ. ಹೀಗಾಗಿ 1 ಕೋಟಿಗೂ ಅಧಿಕ ಮಂದಿಗೆ ತುಳುವೇ ಪ್ರಧಾನ ಭಾಷೆಯಾಗಿದೆ. ತುಳು ಭಾಷೆಗೆ ಈಗಾಗಲೇ ಅಭಿವೃದ್ಧಿಯಾಗಿ ರುವ ಲಿಪಿಯನ್ನು ಜನಪ್ರಿಯಗೊಳಿಸಲು ತುಳು ಅಕಾಡೆಮಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

– ದಿನೇಶ್‌ ಇರಾ

ಟಾಪ್ ನ್ಯೂಸ್

Kolluru-tem

ಕೊಲ್ಲೂರು ದೇಗುಲ: ಡಿಸೆಂಬರ್‌ನಲ್ಲಿ 1.39 ಕೋ.ರೂ. ಕಾಣಿಕೆ ಸಂಗ್ರಹ

SDM-Anche

ಜೀವನ ಶಿಕ್ಷಣದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ: ಸಂಗೀತ ನಿರ್ದೇಶಕ ವಿ.ಮನೋಹರ್‌

Udupi: ಗೀತಾರ್ಥ ಚಿಂತನೆ-170: ಪ್ರತಿಬಿಂಬದಲ್ಲಿ ದೋಷವಿದ್ದರೂ ಬಿಂಬದಲ್ಲಲ್ಲ

Udupi: ಗೀತಾರ್ಥ ಚಿಂತನೆ-170: ಪ್ರತಿಬಿಂಬದಲ್ಲಿ ದೋಷವಿದ್ದರೂ ಬಿಂಬದಲ್ಲಲ್ಲ

Republic Day ಪಥಸಂಚಲನ: ಅಲೋಶಿಯಸ್‌ ಎನ್‌ಸಿಸಿ ಕೆಡೆಟ್‌ಗಳ ಸಾಧನೆ

Republic Day ಪಥಸಂಚಲನ: ಅಲೋಶಿಯಸ್‌ ಎನ್‌ಸಿಸಿ ಕೆಡೆಟ್‌ಗಳ ಸಾಧನೆ

U19 World Cup: G. Trisha century ; Scotland surrenders to India

U19 World Cup: ಜಿ. ತಿೃಷಾ ಶತಕ ದಾಖಲೆ; ಭಾರತಕ್ಕೆ ಶರಣಾದ ಸ್ಕಾಟ್ಲೆಂಡ್‌

DCM-Shivakumar

Uniform Civil Code: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಡಿ.ಕೆ.ಶಿವಕುಮಾರ್‌

INDvENG: ಭಾರತದ ‌ಬ್ಯಾಟಿಂಗ್‌ ಕುಸಿತ: ರಾಜಕೋಟ್‌ ನಲ್ಲಿ ಗೆಲುವಿನ ನಗೆ ಬೀರಿದ ಇಂಗ್ಲೆಂಡ್

INDvENG: ಭಾರತದ ‌ಬ್ಯಾಟಿಂಗ್‌ ಕುಸಿತ: ರಾಜಕೋಟ್‌ ನಲ್ಲಿ ಗೆಲುವಿನ ನಗೆ ಬೀರಿದ ಇಂಗ್ಲೆಂಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-coffee-bg

Coffee; ಈಗ ವಿಶ್ವಕ್ಕೇ ಭಾರತದ ಕಾಫಿ ಘಮ

Oota

Food is valuable; ಆಹಾರ ಪೋಲು ತಡೆಗೆ ಜಾಗೃತಿ ಅತ್ಯವಶ್ಯ

Mauni Amavasya: ಕುಂಭಮೇಳ ಮೈದಾನ ವಾಹನ ರಹಿತ ವಲಯ-2ನೇ ಶಾಹಿ ಸ್ನಾನಕ್ಕೆ‌ ಸಕಲ ಸಿದ್ಧತೆ

Mauni Amavasya: ಕುಂಭಮೇಳ ಮೈದಾನ ವಾಹನ ರಹಿತ ವಲಯ-2ನೇ ಶಾಹಿ ಸ್ನಾನಕ್ಕೆ‌ ಸಕಲ ಸಿದ್ಧತೆ

1-kart

ಸಾರ್ವಜನಿಕರ 76ನೇ ಗಣರಾಜ್ಯೋತ್ಸವ: ಹಲವು ಹೊಸತುಗಳ ಒಳಗೊಂಡಿದೆ

Republic Day ಪೆರೇಡ್ 2025:ಭಾರತೀಯ ರಕ್ಷಣಾ ಸಾಮರ್ಥ್ಯ ಪ್ರದರ್ಶನ;ಆಗಸದಲ್ಲಿ ಭಾರತದ ಪಾರಮ್ಯ

Republic Day ಪೆರೇಡ್ 2025:ಭಾರತೀಯ ರಕ್ಷಣಾ ಸಾಮರ್ಥ್ಯ ಪ್ರದರ್ಶನ;ಆಗಸದಲ್ಲಿ ಭಾರತದ ಪಾರಮ್ಯ

MUST WATCH

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

ಹೊಸ ಸೇರ್ಪಡೆ

Kolluru-tem

ಕೊಲ್ಲೂರು ದೇಗುಲ: ಡಿಸೆಂಬರ್‌ನಲ್ಲಿ 1.39 ಕೋ.ರೂ. ಕಾಣಿಕೆ ಸಂಗ್ರಹ

Arrest

Kumbale: ಆರಿಕ್ಕಾಡಿ ಕೋಟೆ: ನಿಧಿ ಶೋಧ: ಐವರ ಸೆರೆ

SDM-Anche

ಜೀವನ ಶಿಕ್ಷಣದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ: ಸಂಗೀತ ನಿರ್ದೇಶಕ ವಿ.ಮನೋಹರ್‌

Byndoor-Short

short circuit: ಶಿರೂರು ಗ್ರಾಮದ ಅಳ್ವೆಗದ್ದೆಯಲ್ಲಿ ಮನೆಗೆ ಬೆಂಕಿ

Suside-Boy

Malpe: ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.