Advertisement

ಕಾರ್ನಾಡ್‌ ನಾಟಕೋತ್ಸವದಲ್ಲಿ ತುಘಲಕ್‌

02:25 PM May 26, 2018 | |

ಗಿರೀಶ್‌ ಕಾರ್ನಾಡರ ಮಹತ್ವದ ಕಾಣ್ಕೆಗಳಲ್ಲಿ “ತುಘಲಕ್‌’ ನಾಟಕವನ್ನು ಮರೆಯುವಂತಿಲ್ಲ. 14ನೇ ಶತಮಾನದ ಮಹಮದ್‌ ಬಿನ್‌ ತುಘಲಕ್‌ನ ಕತೆ ಎಲ್ಲರಿಗೂ ಗೊತ್ತು. ಅದನ್ನು ನೆಹರು ಅವರ ಕಾಲಕ್ಕೆ ರೂಪಕವಾಗಿ ಬಳಸಿಕೊಂಡಿರುವುದು ಈ ನಾಟಕದ ಜಾಣ್ಮೆ.

Advertisement

ತುಘಲಕ್‌ ಯಾಕೆ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್‌ಗೂ, ಅಲ್ಲಿಂದ ಪುನಃ ದೆಹಲಿಗೂ ಯಾಕೆ ಬದಲು ಮಾಡಿದ? ತಾಮ್ರದ ನಾಣ್ಯಗಳನ್ನು ಚಾಲನೆಗೆ ತಂದು, ಜನೋಪಯೋಗಿ ಆಡಳಿತ ನೀಡಿದ ತುಘಲಕ್‌ನ ನಿಲುವುಗಳನ್ನು ಅವಲೋಕನದ ಕನ್ನಡಿಯಲ್ಲಿ ಹಿಡಿದು ನೋಡುವ ಪ್ರಯತ್ನವನ್ನು ಕಾರ್ನಾಡರು ಇಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ.

ಬೆಂಗಳೂರಿನ ದಿ ಕೆನರಾ ಯೂನಿಯನ್‌ ಮತ್ತು ಮಹಾರಾಷ್ಟ್ರ ಮಂಡಳ್‌ ಜಂಟಿಯಾಗಿ ಕಾರ್ನಾಡ್‌ ನಾಟಕೋತ್ಸವವನ್ನು ಆಯೋಜಿಸಿದ್ದು, ಅದರಲ್ಲಿ ಈ ಮರಾಠಿ ನಾಟಕ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಸಂಥ ಕಾಸ್ಮೋಪಾಲಿಟನ್‌ ನಗರದ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡು ನಾಟಕವನ್ನು ಪ್ರಸ್ತುತಪಡಿಸಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸುಜಯ್‌ ಘೋರ್ಪಡ್ಕರ್‌.

ಯಾವಾಗ?: ಮೇ 27, ಭಾನುವಾರ, ಬೆ.10
ಎಲ್ಲಿ?: ಚೌಡಯ್ಯ ಮೆಮೋರಿಯಲ್‌ ಹಾಲ್‌, 16ನೇ ಕ್ರಾಸ್‌, ಮಲ್ಲೇಶ್ವರಂ
ಟಿಕೆಟ್‌: 249 ರೂ. ನಿಂದ ಶುರು

Advertisement

Udayavani is now on Telegram. Click here to join our channel and stay updated with the latest news.

Next