Advertisement

ಮಂಗಳವಾರದ ರಾಶಿ ಫಲ : ತಾಳ್ಮೆ, ಸಹನೆ ಕಳೆದುಕೊಳ್ಳದೇ ಕಾರ್ಯ ನಿರ್ವಹಿಸಿ

07:32 AM Nov 22, 2022 | Team Udayavani |

ಮೇಷ: ತಾಳ್ಮೆ, ಸಹನೆ ಕಳೆದುಕೊಳ್ಳದೇ ಕಾರ್ಯ ನಿರ್ವಹಿಸಿ. ಅಧಿಕ ಪರಿಶ್ರಮ ಎದುರಾದೀತು. ಹಣಕಾಸಿನ ವಿಚಾರದಲ್ಲಿ ಏರುಪೇರು ಸಂಭವ. ಮನೆ, ಆಸ್ತಿ ವಿಚಾರದಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.

Advertisement

ವೃಷಭ: ಅನಿರೀಕ್ಷಿತ ಸ್ಥಾನಮಾನ ಗೌರವಾದಿ ಸುಖ ಸಂಭವ. ಉದ್ಯೋಗ ವ್ಯವಹಾರ ದಲ್ಲಿ ಸಫ‌ಲತೆ. ದೈನಂದಿನ ಚಟುವಟಿಕೆಗಳಲ್ಲಿ ಪರಿಶುದ್ಧತೆ ಯಿಂದ ಮಾನಸಿಕ ನೆಮ್ಮದಿ. ಗೃಹದಲ್ಲಿ ಸಂತಸದ ವಾತಾವರಣ. ಪತಿ ಪತ್ನಿಯರಲ್ಲಿ ಅನುರಾಗ ವೃದ್ಧಿ.

ಮಿಥುನ: ಉತ್ತಮ ವಾಕ್‌ಚತುರತೆ. ದಾಕ್ಷಿಣ್ಯ ಪ್ರವೃತ್ತಿ ಯಿಂದ ನಷ್ಟ ಸಂಭವ. ಉದ್ಯೋಗ ವ್ಯವ ಹಾರ ಗಳಲ್ಲಿ ಅಭಿವೃದ್ಧಿದಾಯಕ ಪ್ರಗತಿ. ಗುರುಹಿರಿಯ ರಿಂದ ಸಹಾಯ, ಸಹಕಾರ ಮಾರ್ಗ ದರ್ಶನದ ಲಾಭ. ಗೃಹದಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ.

ಕರ್ಕ: ನಿರೀಕ್ಷೆಯಂತೆ ಅಧಿಕ ಧನಾಗಮನ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖಕರ. ದೂರ ಪ್ರಯಾಣ ಸಂಭವ. ಆಸ್ತಿ ಹೂಡಿಕೆ ವಿಚಾರಗಳಲ್ಲಿ ಪ್ರಗತಿ. ದೂರದ ಮಿತ್ರರಿಂದ ಸಹಾಯ ಸುವಾರ್ತೆ.

ಸಿಂಹ: ಹಲವಾರು ವಿಳಂಬಿತ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಂಭವ. ದೂರದ ವ್ಯವಹಾರಗಳಿಂದ ಧನಲಾಭ. ಮಾತಿನಲ್ಲಿ ಜಾಗ್ರತೆ ವಹಿಸುವುದರಿಂದ ಅಧಿಕ ಲಾಭ ಸಂಭವ. ವಿದ್ಯೆ, ಜ್ಞಾನ. ಗುರುಹಿರಿಯರಿಂದ ಅನುಕೂಲಕರ ಪರಿಸ್ಥಿತಿ. ದಾಂಪತ್ಯ ತೃಪ್ತಿದಾಯಕ.

Advertisement

ಕನ್ಯಾ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನಮಾನ ಗೌರವ ಪ್ರಾಪ್ತಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷ ವಾರ್ತೆ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಮನೆಯಲ್ಲಿ ಕೌಟುಂಬಿಕ ಸುವಾರ್ತೆ, ಧಾರ್ಮಿಕ ವಿಚಾರಗಳಲ್ಲಿ ಶ್ರದ್ಧೆ ವೃದ್ಧಿ.

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ಮೀರಿದ ಪ್ರತಿಫ‌ಲ ದೊರಕಿದ್ದರಿಂದ ಅಧಿಕ ಸಂತೋಷ. ನಿರಂತರ ಧನಾರ್ಜನೆ. ನೂತನ ಹೂಡಿಕೆ ಗಳು ಸಂಭವ. ಅವಿವಾಹಿತರಿಗೆ ವಿವಾಹ ಯೋಗ. ಗುರು ಹಿರಿಯ ರಲ್ಲಿ ಸಮಾಧಾನದಿಂದ ವರ್ತಿಸಿ ವ್ಯವಹರಿಸಿ.

ವೃಶ್ಚಿಕ: ಆರೋಗ್ಯ ಉತ್ತಮ. ಧನಾರ್ಜನೆಗೆ ಕೊರತೆ ಕಾಣದು. ಗೃಹದಲ್ಲಿ ಸಂತೋಷದ ವಾತಾ ವರಣ. ಬಂಧುಮಿತ್ರರ ಸಹಕಾರ, ಪ್ರೋತ್ಸಾಹ. ಮಕ್ಕಳಿಂದ ಅನುಕೂಲಕರ. ದಾಂಪತ್ಯ ಸುಖ ತೃಪ್ತಿದಾಯಕ. ಅವಿವಾಹಿತರಿಗೆ ವಿವಾಹ ಯೋಗ ಒದಗಿಬರುವುದು.

ಧನು: ಭೂಮಿ, ಆಸ್ತಿ, ವಾಹನಾದಿ ವಿಚಾರ ಗಳಲ್ಲಿ ಪ್ರಗತಿ. ನೂತನ ಮಿತ್ರರ ಭೇಟಿ. ತಾಯಿ ಸಮಾನರಿಂದ ಅಧಿಕ ಲಾಭ. ಸುಖ ಸಂತೋಷ ವೃದ್ಧಿ. ಗೃಹದಲ್ಲಿ ಮಂಗಳಕಾರ್ಯದ ಸಂಭ್ರಮ. ಜ್ಞಾನ ವಿದ್ಯೆ ಸಂಬಂಧ ವಿಚಾರಗಳಿಗೆ ಹೆಚ್ಚಿದ ಆದ್ಯತೆ.

ಮಕರ: ಆರೋಗ್ಯ ಸುದೃಢ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಯಶಸ್ಸು ಲಭಿಸಲಿದೆ. ಸಹೋದ್ಯೋಗಿಗಳಿಂದ, ಭಾÅತೃಸಮಾನರಿಂದ ಉತ್ತಮ ಸಹಕಾರ. ನೂತನ ಬಂಧುಮಿತ್ರರ ಭೇಟಿ. ಆಸ್ತಿ ವಿಚಾರ ಗಳಲ್ಲಿ ಹೆಚ್ಚಿದ ಆದ್ಯತೆ.

ಕುಂಭ: ದೀರ್ಘ‌ ಸಂಚಾರ. ದೂರದ ವ್ಯವಹಾರ ಗಳಲ್ಲಿ ಪ್ರಗತಿ. ಉತ್ತಮ ವಾಕ್‌ ಚತುರತೆ ಯಿಂದ ಕೂಡಿದ ವ್ಯವಹಾರ. ವಿದ್ಯಾರ್ಥಿಗಳಿಗೆ ಅನುಕೂಲ ಕರ ಪರಿಸ್ಥಿತಿ. ಅನಿರೀಕ್ಷಿತ ಧನಲಾಭ. ಸಾಂಸಾರಿಕ ಸುಖ ತೃಪ್ತಿದಾಯಕ.

ಮೀನ: ಆರೋಗ್ಯ ಉತ್ತಮ. ನಾಯಕತ್ವ ಗುಣ ವೃದ್ಧಿ. ದಂಪತಿಗಳಲ್ಲಿ ಪರಸ್ಪರ ಸಹಕಾರದಿಂದ ಎಲ್ಲಾ ಕೆಲಸಕಾರ್ಯಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಪಾಲುದಾರಿಕಾ ಉದ್ಯೋಗಗಳಲ್ಲಿ ಗಣನೀಯ ಪ್ರಗತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next