Advertisement
ಸಮೃದ್ಧವಾಗಿ ಮಳೆಯಾದರೆ ಮಾತ್ರ ಇಲ್ಲಿನ ಕೆರೆ ಕಟ್ಟೆಗಳುತುಂಬುತ್ತವೆ. ಇಲ್ಲವಾದರೆ ಬರದ ಛಾಯೆಯಲ್ಲಿಕಷ್ಟದ ಬದುಕು ನಡೆಸಬೇಕಾಗುತ್ತದೆ.ಬೇಸಿಗೆ ಆರಂಭದಲ್ಲಿಯೇ ಬಹುತೇಕ ಕೆರೆ ಕಟ್ಟೆಗಳುಒಣಗಿದ್ದು, ನೀರಿನ ಸಮಸ್ಯೆ ತೀವ್ರವಾಗಿದೆ. ಬಹುತೇಕಗ್ರಾಮಗಳು ಕುಡಿವ ನೀರಿಲ್ಲದೇ ಕಂಗಾಲಾಗಿವೆ.
Related Articles
Advertisement
ಅಂತರ್ಜಲ ಮಟ್ಟ ಕುಸಿತ: ಸಂತೇಬಾಚಹಳ್ಳಿಯಹೋಬಳಿ ಶೇ.80 ಗ್ರಾಮಗಳ ಜನ ಕುಡಿವ ನೀರಿಗಾಗಿಕೊಳವೆಬಾವಿ ಆಶ್ರಯಿಸಿದ್ದಾರೆ. ಶೇ.20 ಜನ ಕೆರೆನೀರನ್ನು ಅವಲಂಭಿಸಿದ್ದಾರೆ. ಬಿಸಿಲಿನ ತಾಪಹೆಚ್ಚುತ್ತಿದ್ದಂತೆ ಕೆರೆಗಳೂ ಖಾಲಿಯಾಗುತ್ತಿದ್ದು,ಅಂತರ್ಜಲ ಮಟ್ಟ ಕುಸಿಯುತ್ತಿದೆ. 400 ಅಡಿಗಳಿಗೆಸಿಗುತ್ತಿದ್ದ ನೀರು ಈಗ 700 ಅಡಿ ಕೊರೆಸಿದರೂಸಿಗುತ್ತಿಲ್ಲ.
ಹೀಗಾಗಿ ಕೊಳವೆ ಬಾವಿಗಳನ್ನೇಅವಲಂಭಿಸಿರುವ ಗ್ರಾಮಗಳ ಜನ ಮತ್ತಷ್ಟು ಸಂಕಷ್ಟಕ್ಕೆಸಿಲುಕುವ ಸಾಧ್ಯತೆ ಇದೆ.ಸಮರ್ಪಕಕುಡಿಯುವನೀರುಕಳೆದ ತಿಂಗಳು ಅಪ್ಪನಹಳ್ಳಿ ಗ್ರಾಮದ ಕುಡಿಯುವನೀರಿಗಾಗಿ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದು,ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.
ಕಳೆದ ವಾರಬಿದ್ದ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯವಾಗಿ ಕೊಳವೆಬಾವಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಲಾಕ್‌ಡೌನ್ ಪರಿಣಾಮ ಕೊಳವೆ ಬಾವಿ ರಿಪೇರಿಯ ನೌಕ ರರುಬಂದು ರೀಪೇರಿ ಮಾಡಲು ಸಾಧ್ಯವಾಗಿರಲಿಲ್ಲ. ಕುಡಿವನೀರಿನ ಸಮಸ್ಯೆ ಅರಿತು ತಕ್ಷಣದಲ್ಲೇ ರಿಪೇರಿ ಮಾಡಿಕುಡಿಯುವ ನೀರಿನ ವ್ಯವಸ್ಥೆà ಮಾಡಲಾಗಿದೆ ಎಂದುರಂಗನಾಥಪುರ ಕ್ರಾಸ್ ಪಿಡಿಒ ಕುಮಾರ್ ತಿಳಿಸಿದ್ದಾರೆ.
ಅಪ್ಪನಹಳ್ಳಿ ಅರುಣ್