Advertisement

ತಿಮ್ಮಪ್ಪನ ದರ್ಶನಕ್ಕೆ ಬುಕಿಂಗ್‌ ಆರಂಭ

07:09 PM Sep 20, 2022 | Team Udayavani |

ತಿರುಪತಿ: ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವರ ನವೆಂಬರ್‌ ತಿಂಗಳ ದರ್ಶನಕ್ಕೆ ಬುಧವಾರದಿಂದ ಬುಕಿಂಗ್‌ ಆರಂಭವಾಗಲಿದೆ. 300 ರೂ. ಕೊಟ್ಟು ವಿಶೇಷ ದರ್ಶನಕ್ಕೆ ತೆರಳಲಿಚ್ಛಿಸುವ ಭಕ್ತರು ಬೆಳಗ್ಗೆ 9 ಗಂಟೆಯಿಂದ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು.

Advertisement

ಹಾಗೆಯೇ ಶ್ರೀವಾರಿ ಅರ್ಜಿತ ಸೇವಾ ಟಿಕೆಟ್‌ಗಳನ್ನು ಮಧ್ಯಾಹ್ನ 3 ಗಂಟೆ ನಂತರ ಬುಕ್‌ ಮಾಡಬಹುದು. ಶ್ರೀವಾರಿ ಸೇವಾ ಎಲೆಕ್ಟ್ರಾನಿಕ್‌ ಡಿಐಪಿ ನೋಂದಣಿಯನ್ನು ಸೆ.21ರ ಬೆಳಗ್ಗೆ 10 ಗಂಟೆಯಿಂದ ಸೆ.23ರ ಬೆಳಗ್ಗೆ 10 ಗಂಟೆಯೊಳಗೆ ಮಾಡಿಕೊಳ್ಳಬಹುದು.

ತಿರುಮಲದಲ್ಲಿ ಉಳಿದುಕೊಳ್ಳಲು ವಸತಿ ಬುಕಿಂಗ್‌ ಮಾಡುವವರು ಸೆ.26ರ ಬೆಳಗ್ಗೆ 9 ಗಂಟೆಯಿಂದ ಬುಕಿಂಗ್‌ ಮಾಡಬಹುದು. ಅದರ ಜತೆ ಅಕ್ಟೋಬರ್‌ ತಿಂಗಳ ತಿರುಮಲ ಅಂಗಪ್ರದಕ್ಷಣಮ್‌ಗೆ ಬುಕಿಂಗ್‌ ಮಾಡುವವರು ಸೆ.22ರ ಬೆಳಗ್ಗೆ 9 ಗಂಟೆಯಿಂದ ಬುಕಿಂಗ್‌ ಮಾಡಿಕೊಳ್ಳಬಹುದು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next