ಬೆಂಗಳೂರು: ಅಪಹರಣ ಮತ್ತು ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಬಿಗ್ಬಾಸ್ ಸ್ಪರ್ಧಿ ಸುನಾಮಿ ಕಿಟ್ಟಿ ಸೇರಿ ಮೂವರನ್ನು ಜ್ಞಾನ ಭಾರತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವರದಿಯಾದಂತೆ ಬಾರ್ವೊಂದರಲ್ಲಿ ಸ್ನೇಹಿತ ಸುನಿಲ್ನೊಂದಿಗೆ ಸಪ್ಲಾಯರ್ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಆರೋಪದಲ್ಲಿ ಕಿಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸುನಿಲ್ ಪತ್ನಿ ಪ್ರಿಯಕರ ತೌಸಿಕ್ ಗೌಡನೊಂದಿಗೆ ರೆಸ್ಟೊರೆಂಟ್ಗೆ ಬಂದಿದ್ದ ವೇಳೆ ಕಿಟ್ಟಿ, ಸುನಿಲ್ ಮತ್ತಿಬ್ಬರು ಬಂದು ಸಪ್ಲಯರ್ ಗಿರೀಶ್ನನ್ನು ಪ್ರಿಯಕರ ಎಂದು ತಿಳಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತೌಸಿಕ್ ಗೌಡನನ್ನು ಅಪಹರಿಸಿ ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣದಿಂದ ನೊಂದ ಸುನಿಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ಷಣೆಗೊಳಗಾದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅರ್ಜುನ್ ಮತ್ತು ಯೋಗೀಶ್ ಎನ್ನುವವರು ಇನ್ನಿಬ್ಬರು ಬಂಧಿತರಾಗಿದ್ದರೆ, ಪ್ರಮುಖ ಆರೋಪಿ ಸುನಿಲ್ ತಲೆ ಮರೆಸಿಕೊಂಡಿದ್ದಾನೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.