Advertisement

ದಕ್ಷಿಣ ಫೆಸಿಫಿಕ್ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟ: ಅಮೆರಿಕಕ್ಕೆ ಸುನಾಮಿ ಭೀತಿ!

10:38 AM Jan 16, 2022 | Team Udayavani |

ವೆಲ್ಲಿಂಗ್ಟನ್‌: ದಕ್ಷಿಣ ಪೆಸಿಫಿಕ್‌ ಸಾಗರ ವ್ಯಾಪ್ತಿಯಲ್ಲಿರುವ ದ್ವೀಪ ರಾಷ್ಟ್ರ ಟೋಂಗಾ ಕರಾವಳಿಯಾಚೆ ಸಮುದ್ರದ ಆಳದಲ್ಲಿ ಜಾಲ್ವಾಮುಖೀ ಸ್ಫೋಟಗೊಂಡಿದೆ.

Advertisement

ಪರಿಣಾಮವೆಂಬಂತೆ, ರಕ್ಕಸ ಅಲೆಗಳು ತೀರಕ್ಕೆ ಬಡಿಯಲಾರಂಭಿಸಿವೆ. ಸುನಾಮಿಗೆ ಬೆದರಿದ ಜನರು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇದೇ ವೇಳೆ, ಹವಾಯಿ, ಅಲಾಸ್ಕಾ ಹಾಗೂ ಅಮೆರಿಕದ ಪೆಸಿಫಿಕ್‌ ಕರಾವಳಿಗೂ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಉಪಗ್ರಹದಿಂದ ಪ್ರಾಪ್ತ ವಾದ ದತ್ತಾಂಶ ಮತ್ತು ಫೋಟೋಗಳ ಪ್ರಕಾರ, ಸಮುದ್ರ ಮೇಲ್ಮೈ ಭಾಗದಿಂದ 12 ಮೈಲು ಎತ್ತರದ ವರೆಗೆ ಜ್ವಾಲಾಮುಖಿ ಯಿಂದ ಹೊರಬಂದ ಬೂದಿ ಆವರಿಸಿಕೊಂಡಿದೆ. ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮವಾಗಿ ಸಮುದ್ರದ ಅಲೆಗಳು ಉಕ್ಕೇರಿ, ತೀರ ಪ್ರದೇಶಗಳನ್ನು ಮೀರಿ ನೀರು ಹರಿದಿದೆ.

ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಕೇವಲ 24,000 ಪ್ರೇಕ್ಷಕರಿಗೆ ಮಾತ್ರ ಅವಕಾಶ

ಜ್ವಾಲಾಮುಖಿ ಸ್ಫೋಟದ ರಭಸಕ್ಕೆ ನಾಲ್ಕು ಅಡಿ ಎತ್ತರಕ್ಕೆ ಅಲೆಗಳು ಉಕ್ಕೇರಿ ಅಪ್ಪಳಿಸಿವೆ. ನ್ಯೂಜಿಲೆಂಡ್‌ ವರೆಗೆ ಸ್ಫೋಟದ ಸದ್ದು ಕೇಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next